ಹೇರ್ ಕಲರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ

20 yelandur 02
Published on

ಯಳಂದೂರು: ಪಟ್ಟಣದ ದೇವಾಂಗ ಬೀದಿಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ವಿಜಯವಾಣಿ ಕನ್ನಡ ದಿನಪತ್ರಿಕೆ ಹಾಗೂ ಗಾರ್ನಿಯರ್ ಹೇರ್ ಕಲರಿಂಗ್ ಕಂಪನಿ ವತಿಯಿಂದ ಹಮ್ಮಿಕೊಂಡಿರುವ ಹೇರ್‌ಕಲರ್ ಅಭಿಯಾನಕ್ಕೆ 2ನೇ ದಿನವಾದ ಸೋಮವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ 10 ಗಂಟೆಯಿಂದ ಆರಂಭಗೊಂಡ ಅಭಿಯಾನದಲ್ಲಿ ಮಳೆಯ ನಡುವೆಯೂ ಯುವಕರು, ಮಹಿಳೆಯರು ಹಾಗೂ ಪರುಷರು ತಂಡೋಪತಂಡವಾಗಿ ಆಗಮಿಸಿ ತಮ್ಮಿಚ್ಛೆಯ ಬಣ್ಣವನ್ನು ಹಾಕಿಸಿಕೊಂಡರು. ಗಾರ್ನಿಯರ್ ಕಂಪನಿ ಹಾಗೂ ವಿಜಯವಾಣಿ ದಿನಪತ್ರಿಕೆಯ ಕಾಳಜಿಯನ್ನು ಕೊಂಡಾಡಿದರು. ಇದೊಂದು ಹೊಸ ಪ್ರಯೋಗವಾಗಿದ್ದು, ಇಂತಹ ಸಮಾಜಪರ ಕೆಲಸಗಳನ್ನು ನಿರ್ವಹಿಸುತ್ತಿರುವ ಪತ್ರಿಕೆಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉರಗ ತಜ್ಞ ಸ್ನೇಕ್ ಸುಂದರ್, ಜೈಗುರು, ಹನುಮಂತ, ನಂದಾ, ಮಹದೇವಮ್ಮ, ದಿವ್ಯಾ, ಕೋಮಲಾ ಸೇರಿದಂತೆ ಅನೇಕರು ಇದ್ದರು.

ಹೇರ್ ಕಲರ್ ಅಭಿಯಾನ ವಿಶಿಷ್ಟವಾಗಿದೆ. ಸದಾ ಹೊಸತನಕ್ಕೆ ಹೆಸರಾಗಿರುವ ವಿಜಯವಾಣಿ ದಿನಪತ್ರಿಕೆ ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಡಲಿ.ನಂದಾ ಮಾದೇಶ್, ಗೃಹಿಣಿ ಕೆಸ್ತೂರು ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net