ಎಸ್‌ಡಿಎಂಸಿ ಅಧ್ಯಕ್ಷರಾಗಿ ನಾರಾಯಣ್ ಆಯ್ಕೆ

Oplus_0
Oplus_0
Published on


ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ -1 ರ ಎಸ್‌ಡಿಎಂಸಿ ಅಧ್ಯಕ್ಷರಾಗಿ ಎಸ್.ನಾರಾಯಣ್ ಹಾಗೂ ಉಪಾಧ್ಯಕ್ಷರಾಗಿ ಶ್ರುತಿ ಅವಿರೋಧ ಆಯ್ಕೆಯಾದರು. ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಡಿಎಂಸಿ ಸದಸ್ಯರ ಸಭೆಯಲ್ಲಿ ಪಾಲಕರ ಅಭಿಪ್ರಾಯ ಪಡೆದ ನಂತರ ಅಧ್ಯಕ್ಷರ ಆಯ್ಕೆ ನೆರವೇರಿತು. ಅಧ್ಯಕ್ಷ ಎಸ್.ನಾರಾಯಣ್ ಈ ಸಂದರ್ಭ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಎಸ್‌ಡಿಎಂಸಿಯಿಂದ ಶಿಕ್ಷಕ ವರ್ಗಾವಣೆ, ಮಕ್ಕಳ ಕಲಿಕೆ, ಪಾಠ ಪ್ರವಚನ, ಶಾಲಾಭಿವೃದ್ಧಿ ಸೇರಿದಂತೆ ಮಕ್ಕಳ ಕಲಿಕೆ ಮಟ್ಟ ವೃದ್ಧಿಯಾಗಲಿದೆ. ಸಮಿತಿಗೆ ಸದಸ್ಯರ ಸಹಕಾರ , ಪಾಲಕರ ಸಲಹೆ, ಸೂಚನೆ ಅಗತ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net