ಕೊಂಡೋತ್ಸವಕ್ಕೆ ಮೆರವಣಿಗೆಯಲ್ಲಿ ಸೌದೆ ಸಾಗಣೆ

05 yelandur 03
Published on

ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಉಪ್ಪಾರ ಬೀದಿಯಲ್ಲಿ ಮಾ.9ರಂದು ನಡೆಯಲಿರುವ ದೊಡ್ಡಮ್ಮತಾಯಿ, ಚಿಕ್ಕಮ್ಮತಾಯಿ ಹಾಗೂ ಚಾಮುಂಡೇಶ್ವರಿ ಕೊಂಡೋತ್ಸವಕ್ಕೆ ಸೌದೆಯನ್ನು ಗುರುವಾರ ಪಟ್ಟಣದಲ್ಲಿ ಅಲಂಕೃತ ವಾಹನಗಳಲ್ಲಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಸಾಗಿಸಲಾಯಿತು.


ತಾಲೂಕಿನ ಕಂದಹಳ್ಳಿ ಮಹದೇಶ್ವರ ದೇವಸ್ಥಾನದ ಆವರಣದಿಂದ ಮೆರವಣಿಗೆ ಆರಂಭಗೊಂಡಿತು.


ಎತ್ತುಗಳ ಕೊಂಬು, ದೇಹ, ಎತ್ತಿನಗಾಡಿಗಳನ್ನು ವಿಶೇಷ ಪುಷ್ಪಗಳು, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದ್ದರು. ಟ್ರ್ಯಾಕ್ಟರ್ ಹಾಗೂ ಗೂಡ್ಸ್ ಆಟೋಗಳನ್ನು ಸಿಂಗರಿಸಿ ಇದರಲ್ಲಿ ಕಟ್ಟಿಗೆಗಳನ್ನು ಹಾಕಿಕೊಂಡು ಸರತಿ ಸಾಲಿನಲ್ಲಿ ಹತ್ತಾರು ವಾಹನಗಳು ಯಳಂದೂರು ಪಟ್ಟಣದ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಸಾಗಿತು.


ಈ ಸಂದರ್ಭದಲ್ಲಿ ವಾಹನ ಸವಾರರಿಗೆ ತೊಂದರೆಯಾಗದ ರೀತಿಯಲ್ಲಿ ಪೊಲೀಸರು ವಾಹನಗಳನ್ನು ಸರಾಗವಾಗಿ ಚಲಿಸಲು ಅನುಕೂಲ ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net