ಯಲಾದಹಳ್ಳಿ, ದೊಡ್ಡರಸಿನಕೆರೆ ಸೀಲ್‌ಡೌನ್

11KMD-2
Published on

ಕೆ.ಎಂ.ದೊಡ್ಡಿ: ಸಮೀಪದ ಯಲಾದಹಳ್ಳಿಯಲ್ಲಿ ಆಶಾ ಕಾರ್ಯಕರ್ತೆ ಹಾಗೂ ದೊಡ್ಡರಸಿನಕೆರೆ ಗ್ರಾಮದವನಾದ ಮದ್ದೂರಿನ ಎಲ್‌ಐಸಿ ಕಚೇರಿಯ ಕಾವಲುಗಾರನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಶನಿವಾರ ಎರಡು ಗ್ರಾಮಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ.

ಆಶಾ ಕಾರ್ಯಕರ್ತೆಗೆ ವಾರದ ಹಿಂದೆ ಜ್ವರದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಜು.6ರಂದು ಮದ್ದೂರಿನ ಕೆ.ಗುರುಶಾಂತಪ್ಪ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಶನಿವಾರ ಕರೊನಾ ದೃಢವಾಗಿದೆ. ಇದರಿಂದ ಈಕೆ ವಾಸವಿದ್ದ ಯಲಾದಹಳ್ಳಿಯ ಬೀದಿಯನ್ನು ಸೀಲ್‌ಡೌನ್ ಮಾಡಿ, ಸೋಂಕಿತಳ ಕುಟುಂಬಸ್ಥರು ಮತ್ತು ಪ್ರಥಮ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಮದ್ದೂರಿನ ಎಲ್‌ಐಸಿ ಕಚೇರಿಯಲ್ಲಿ ಕಾವಲುಗಾರನಾಗಿದ್ದ ದೊಡರಸಿನಕೆರೆ ಗ್ರಾಮದ ಯುವಕನಿಗೆ ಸೋಂಕು ದೃಢವಾಗಿದ್ದು, ಈತ ವಾಸವಿದ್ದ ಬೀದಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net