ಯಲಗಟ್ಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

190120 Lingasugru New Baby Girl
Published on

ಲಿಂಗಸುಗೂರು: ತಾಲೂಕಿನ ಯಲಗಟ್ಟ ಗ್ರಾಮದ ಹೊರವಲಯದಲ್ಲಿ ಭಾನುವಾರ ಬೆಳಗ್ಗೆ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ 108 ಆಂಬುಲೆನ್ಸ್ ಮೂಲಕ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆಸ್ಪತ್ರೆ ವೈದ್ಯರಾದ ಅನಿಲ್ ಕುಮಾರ, ಲಕ್ಷ್ಮಪ್ಪ, ದಿಗಂಬರ ಶಿಶುವಿನ ಆರೋಗ್ಯ ತಪಾಸಣೆ ನಡೆಸಿ, ಶಿಶು ಸ್ವಲ್ಪ ಕಡಿಮೆ ತೂಕ ಹೊಂದಿದ್ದರೂ ಆರೋಗ್ಯವಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಗೆ ಭೇಟಿ ನೀಡಿದ ಸಿಡಿಪಿಒ ಲಿಂಗನಗೌಡ, ‘ಮಗುವಿನ ಯೋಗಕ್ಷೇಮ ವಿಚಾರಿಸಿ, ಮಗುವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳುಹಿಸಿಕೊಡುವುದಾಗಿ’ ತಿಳಿಸಿದರು. ಹೆಣ್ಣು ಶಿಶುವೆಂದು ಯಾರೋ ಅಪರಿಚಿತರು ಗ್ರಾಮದ ಹೊರವಲಯದಲ್ಲಿ ಇಟ್ಟು ಹೋಗಿರಬಹುದೆಂಬ ಶಂಕೆ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಅಂಗನವಾಡಿ ಮೇಲ್ವಿಚಾರಕಿ ಶಾಂತಮ್ಮ, ಆಶಾ ಕಾರ್ಯಕರ್ತೆ ಚಂದ್ರಮ್ಮ ಹಾಗೂ 108 ಅಂಬುಲೆನ್ಸ್ ಸಿಬ್ಬಂದಿ ನವಜಾತ ಶಿಶುವಿನ ರಕ್ಷಣೆಗೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net