ಗುಣಮಟ್ಟದ ಕಾಮಗಾರಿ ನಡೆಸಿ

VISIT
ಯಲಬುರ್ಗಾ ತಾಲೂಕಿನ ಯಾಪಲದಿನ್ನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಛಾವಣಿಯ ಸೀಲಿಂಗ್‌ನ ಸಿಮೆಂಟ್ ಕಳಚಿಬಿದ್ದ ಸ್ಥಳಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ರಂಗಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಇಒ ಸೋಮಶೇಖರಗೌಡ ಪಾಟೀಲ್, ಬಿಆರ್‌ಸಿ ಅಶೋಕ ಗೌಡರ, ಪಿಡಬ್ಲುೃಡಿ ಇಂಜಿನಿಯರ್ ಮಹಾಂತೇಶ ಹಿರೇಮಠ ಇದ್ದರು.
Published on

ಯಲಬುರ್ಗಾ: ತಾಲೂಕಿನ ಯಾಪಲದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಛಾವಣಿಯ ಸೀಲಿಂಗ್ ಸಿಮೆಂಟ್ ಕಳಚಿಬಿದ್ದ ಸ್ಥಳಕ್ಕೆ ಪಟ್ಟಣದ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ರಂಗಸ್ವಾಮಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಯಾವುದೇ ಶಾಲೆಗಳ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ನಡೆಸಬೇಕು. ಸಂಬಂಧಿಸಿದ ಅಧಿಕಾರಿ ಮತ್ತು ಗುತ್ತಿಗೆದಾರರು ಛಾವಣಿ ಸಿಮೆಂಟ್ ಕಳಚಿಬಿದ್ದುದನ್ನು ಪುನಃ ನಿರ್ಮಿಸಬೇಕು ಎಂದು ನಿರ್ದೇಶಿಸಿದರು.

ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಶಾಲೆಯಲ್ಲಿ ಮೂಲ ಸೌಕರ್ಯ, ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಕಾಮಗಾರಿ ಕಳಪೆ ನಡೆಸುವ ಮೂಲಕ ಅನಾಹುತಗಳಿಗೆ ದಾರಿ ಮಾಡಿಕೊಡಬೇಡಿ ಎಂದು ತಿಳಿಸಿದರು.

ಈ ಕುರಿತು ಅ.7ರಂದು ‘ಕಳಚಿಬಿದ್ದ ಶಾಲಾ ಛಾವಣಿಯ ಸಿಮೆಂಟ್’ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ರಂಗಸ್ವಾಮಿ, ಬಿಇಒ ಸೋಮಶೇಖರಗೌಡ ಪಾಟೀಲ್, ಬಿಆರ್‌ಸಿ ಅಶೋಕ ಗೌಡರ, ಪಿಡಬ್ಲುೃಡಿ ಇಂಜಿನಿಯರ್ ಮಹಾಂತೇಶ ಹಿರೇಮಠ, ಶಿರಸ್ತೇದಾರ್ ಎನ್. ಲೋಕೇಶ, ಸ್ಥಳಕ್ಕೆ ಭೇಟಿ ನೀಡಿದರು. ಸಿಆರ್‌ಪಿ ಮಾನಪ್ಪ ಪತ್ತಾರ, ಮುಖ್ಯಶಿಕ್ಷಕ ವೀರನಗೌಡ ಪಾಟೀಲ್, ಗುತ್ತಿಗೆದಾರ ಫಕೀರಪ್ಪ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net