ಬಸವಾದಿ ಶರಣರ ವಚನ ಕಟ್ಟು ಆಗಮನವನ್ನು ಸ್ವಾಗಿತಿಸಿಕೊಂಡ ಯಲಬುರ್ಗಾ ಭಕ್ತ ಸಮೂಹ

15062022 Yelburga Hadapad Appanna yatre
Published on

ಯಲಬುರ್ಗಾ: ಹಡಪದ ಅಪ್ಪಣ್ಣ, ವಿಶ್ವಗುರು ಬಸವಣ್ಣನವರ ಸತಿ ಶರಣೆ ನೀಲಮ್ಮತಾಯಿ ಹಾಗೂ ಬಸವಾದಿ ಶರಣರ ವಚನ ಕಟ್ಟು, ಅಡ್ಡಪಲ್ಲಕ್ಕಿ ಉತ್ಸವ ಯಾತ್ರೆ ಮಂಗಳವಾರ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕು ಹಡಪದ ಅಪ್ಪಣ್ಣ ಸಮುದಾಯದಿಂದ ಸ್ವಾಗತಿಸಲಾಯಿತು.

ತಂಗಡಗಿಯ ಹಡಪದ ಅಪ್ಪಣ್ಣ ದೇವರ ಸಂಸ್ಥಾನ, ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸೇವಾ ಸಂಘದ ಸಹಯೋಗದಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡದಿಂದ ತಂಗಡಗಿಯ ಶ್ರೀಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿಗಳ ನೇತೃತ್ವದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನ ಬಳಿ ಆಗಮಿಸುತ್ತಿದ್ದಂತೆ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಪಾಲ್ಗೊಂಡರು.

ಪಲ್ಲಕ್ಕಿ ಪ್ರಮುಖ ರಸ್ತೆಗಳ ಮೂಲಕ ಯಾತ್ರೆ ಸಂಚರಿಸಿದ ಬಳಿಕ ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಅಡ್ಡಪಲ್ಲಕ್ಕಿ ಉತ್ಸವವನ್ನು ಕುಕನೂರು, ಕೊಪ್ಪಳಕ್ಕೆ ಬೀಳ್ಕೊಡಲಾಯಿತು. ಈ ಸಂದರ್ಭ ಹಡಪದ ಅಪ್ಪಣ್ಣ ಸಮುದಾಯದ ತಾಲೂಕು ಅಧ್ಯಕ್ಷ ಶಿವಪ್ಪ ಶಾಸ್ತ್ರಿ, ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ, ಪ್ರಮುಖರಾದ ಮಹಾದೇವಪ್ಪ ಹಡಪದ, ನೀಲಪ್ಪ ತಳಕಲ್, ಪ್ರಭುರಾಜ ಮಾರನಾಳ, ಚನ್ನಪ್ಪ ನಿಡಶೇಸಿ, ವೀರಪ್ಪ ಹಡಪದ, ರಾಜು ಹಪಡದ, ಷಡಕ್ಷರಪ್ಪ ಹಡಪದ, ಶರಣಪ್ಪ ಹಡಪದ, ಗುಂಡಪ್ಪ ಗುನ್ನಾಳ, ಶಿವಪ್ಪ ಬೇವೂರು, ಆನಂದ ಹಡಪದ, ಮಹಾಂತೇಶ ಸಂಕನೂರು, ದೇವಪ್ಪ ಶಾಸ್ತ್ರಿ, ಶರಣಪ್ಪ ಹಡಪದ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net