ಗೋಡೆ ಬರಹದೊಂದಿಗೆ ಶಿಕ್ಷಣಕ್ಕೆ ಉತ್ತೇಜನ

Talakeri Guru Poornima
ಯಲಬುರ್ಗಾ ತಾಲೂಕಿನ ತಾಳಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಲಾಯಿತು.
Published on

ಯಲಬುರ್ಗಾ: ಗುರುಬಳಗದ ಅದ್ಭುತ ತಂಡ ಇರುವುದರಿಂದ ಹಲವು ಸೃಜನಾತ್ಮಕ ಕಾರ್ಯ ಕೈಗೊಳ್ಳಲು ಸಾಧ್ಯವಾಗಿದೆ ಎಂದು ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಹೇಳಿದರು.

ತಾಲೂಕಿನ ತಾಳಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬಂಧು ಸೇವಾ ಗುರುಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಗೋಡೆ ಬರಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ಭಾನುವಾರಕ್ಕೊಮ್ಮೆ ಶಾಲೆಗಳ ಗೋಡೆಗೆ ವ್ಯಾಕರಣ ಬರಹ, ಮಾನವನ ದೇಹದ ಭಾಗಗಳು, ಗಣಿತ ಚಿತ್ರಗಳು ಸೇರಿದಂತೆ ಮಕ್ಕಳನ್ನು ಸೆಳೆಯುವ ಆಕರ್ಷಣೀಯ ಬರಹ ಬರೆಯುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ. ಗುರುಬಳಗದಿಂದ ಇದು 17ನೇ ಗೋಡೆಬರಹ ಸೇವೆಯಾಗಿದೆ ಎಂದರು.

ಎಸ್ಡಿಎಂಸಿ ಅಧ್ಯಕ್ಷ ಪ್ರಸನ್ನ ಶೆಟ್ಟರ್ ಮಾತನಾಡಿ, ವಿವಿಧ ವಿಷಯಗಳ ಕಲಿಕಾಂಶಗಳು, ಚಿತ್ರಗಳು, ಸುಂದರ ಕಾರ್ಟೂನ್, ನಕ್ಷೆಗಳು ಮತ್ತು ಸ್ಫೂರ್ತಿದಾಯಕ ನುಡಿಗಳನ್ನು ಬರೆದು ಶಾಲೆಯನ್ನು ಸುಂದರವಾಗಿಸಿದ ವಿಶ್ವಬಂಧು ಸೇವಾ ಗುರುಬಳಗದ ಕಾರ್ಯ ಶಾಘನಾರ್ಹ ಎಂದರು. ಇದೇ ವೇಳೆ ಗ್ರಾಮಸ್ಥರು, ಶಿಕ್ಷಣಪ್ರೇಮಿಗಳಿಂದ ಗುರುಪೂರ್ಣಿಮೆ ಆಚರಿಸಲಾಯಿತು.

ಗೋಡೆ ಬರಹ ಸೇವಾ ಕಾರ್ಯದಲ್ಲಿ ಶಿಕ್ಷಕರಾದ ಪ್ರಭು ಶಿವನಗೌಡ್ರ, ಸಂಗಯ್ಯ ಹಿರೇಮಠ, ಮಹಾವೀರ ಕಲ್ಭಾವಿ, ಮುರ್ತುಜಾಸಾಬ್ ಮುಜಾವರ, ಹುಸೇನ್‌ಸಾಬ್ ಭಾಗವಾನ್, ಕೊಟ್ರೇಶ ಪಟ್ಟಣ, ಶರಣು ವಾಳದ, ಎಂ.ಜಿ.ರಾಯಣ್ಣವರ, ವೆಂಕಟೇಶ ಚಾಗಿ, ಆಂಜನೇಯ ಈಳಿಗೇರ, ಧರ್ಮಣ್ಣ ಬಿಂಗಿ, ಮರ್ದಾನ್‌ಸಾಬ್ ನಧಾಫ್, ಮಂಜುನಾಥ ಕೊಡಕೇರಿ, ಪರಮೇಶ ಚಿಂತಾಮಣಿ, ಸಿದ್ದಯ್ಯ ಮಠದ, ಹನುಮೇಶ ಬೆಲ್ಲದ, ನಾಗರಾಜ ಶೆಟ್ಟರ್, ಮಲ್ಲಿಕಾರ್ಜುನ ಉಳ್ಳಾಗಡ್ಡಿ ಇದ್ದರು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷ ಮಾರುತಿ ನೀರಲೂಟಿ, ಮುಖ್ಯಶಿಕ್ಷಕಿ ಬಿ.ವಿಶಾಲಾಕ್ಷಿ, ಶಿಕ್ಷಕರಾದ ಹನುಮೇಶ, ರಾಮಪ್ಪ, ರೇವಪ್ಪ, ಶೇಖರಪ್ಪ, ರೇಖಾ, ಶರಣಪ್ಪ ಏಳುಗುಡ್ಡದ, ಪ್ರಮುಖರಾದ ಬಸವರಾಜ ಭಂಗಿ, ಭೀಮಣ್ಣ ಟಣಕನಕಲ್, ಮುತ್ತಣ್ಣ ಹರಕಂಗಿ, ಯಮನೂರಪ್ಪ ಗಧಾರಿ, ಅಜ್ಮೀರ್‌ಸಾಬ್, ಕಿರಣಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net