ವಿಶ್ವಕರ್ಮ ಜಯಂತ್ಯುತ್ಸವ 29ಕ್ಕೆ

SHANKARAPPA
ಶಂಕ್ರಪ್ಪ
Published on

ಯಲಬುರ್ಗಾ: ಪಟ್ಟಣದ ಬಯಲು ರಂಗಮಂದಿರಲ್ಲಿ ವಿಶ್ವಕರ್ಮ ಸಮುದಾಯದ ತಾಲೂಕು ಹಾಗೂ ನಗರ ಘಟಕದಿಂದ ಸೆ.29ರಂದು ವಿಶ್ವಕರ್ಮ ಜಯಂತಿ ಹಾಗೂ ಪೂಜಾಮಹೋತ್ಸವ ಕಾರ್ಯ ಕೈಗೊಳ್ಳಲಾಗಿದೆ ಎಂದು ವಿಶ್ವಕರ್ಮ ಸಮುದಾಯದ ತಾಲೂಕು ಪ್ರಧಾನ ಕಾರ್ಯದರ್ಶಿ ಶಂಕ್ರಪ್ಪ ಬಡಿಗೇರ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜಯಂತಿ ಪ್ರಯುಕ್ತ ಗ್ರಾಮದೇವತೆ ದೇವಸ್ಥಾನದಲ್ಲಿ ಬೆಳಗ್ಗೆ 8ಕ್ಕೆ ಪೂಜೆ ನಡೆಯಲಿದೆ. ಬಳಿಕ ಮಹಿಳೆಯರಿಂದ ಕುಂಭೋತ್ಸವ, ಸಕಲ ವಾದ್ಯಮೇಳದೊಂದಿಗೆ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ಶಾಸಕ ಬಸವರಾಜ ರಾಯರಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಮದಾನೆಗುಂದಿಯ ಸಂಸ್ಥಾನ ಸರಸ್ವತಿ ಪೀಠದ ಶ್ರೀನಾಗಮೂತೇಂದ್ರ ಸ್ವಾಮೀಜಿ, ಶ್ರೀ ದೇವೇಂದ್ರ ಸ್ವಾಮೀಜಿ, ಶ್ರೀ ದಿನಕರ ಸ್ವಾಮೀಜಿ, ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಬಸವಲಿಂಗೆಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮುದಾಯದ ತಾಲೂಕು ಅಧ್ಯಕ್ಷ ಚಂದ್ರಶೇಖರ ಕಮ್ಮಾರ ಮಾತನಾಡಿ, ವಿಶ್ವಕರ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸರ್ಕಾರ ನಮ್ಮ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಮೂಲಕ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಪ್ರಮುಖರಾದ ಮಹಾದೇವಪ್ಪ ಕಮ್ಮಾರ, ಬಸಪ್ಪ ಕಮ್ಮಾರ, ಶಿವಾನಂದ ಬಡಿಗೇರ, ಶರಣಕುಮಾರ ಬಡಿಗೇರ, ಚಂದ್ರಪ್ಪ ಬಡಿಗೇರ, ಗುರುಮೂರ್ತಿ ದಮ್ಮೂರು, ಹನುಮಂತಪ್ಪ ಬಡಿಗೇರ, ಪ್ರಹ್ಲಾದ ಬಡಿಗೇರ, ಉಮೇಶ ಬಡಿಗೇರ, ಸುನೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net