

ಯಲಬುರ್ಗಾ: ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿದ್ಯಾರ್ಥಿಗಳ ಗುರಿ ಸಾಧನೆಗೆ ಪೂರಕವಾಗಿದೆ ಎಂದು ಪ್ರಭಾರ ಪ್ರಾಚಾರ್ಯ ಹನುಮಂತಪ್ಪ ಉಪ್ಪಾರ ಹೇಳಿದರು.
ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗೆ ಶುಕ್ರವಾರ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಿ ಮಾತನಾಡಿದರು.
ಮಕ್ಕಳ ಜ್ಞಾನಾರ್ಜನೆಗೆ ವಿದ್ಯಾರ್ಥಿ ಮಿತ್ರ ಸಂಚಿಕೆ ಉಪಯುಕ್ತವಾಗಿದೆ. ಪಠ್ಯ ವಿಷಯವಲ್ಲದೇ ಪ್ರಚಲಿತ ವಿದ್ಯಮಾನಗಳ ಸಮಗ್ರ ಮಾಹಿತಿಯುಳ್ಳ 8 ಪುಟಗಳ ವಿಜಯವಾಣಿ ವಿದ್ಯಾರ್ಥಿ ಮಿತ್ರ ಕೇವಲ ಒಂದು ರೂಪಾಯಿಗೆ ದೊರಕುತ್ತಿರುವುದು ಮಹತ್ವದ್ದಾಗಿದೆ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಈ ಸಂಚಿಕೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಿಲಯ ಪಾಲಕ ಸಾಹೇಬಗೌಡ, ಶಿಕ್ಷಕರಾದ ಕಲ್ಲಿನಾಥಯ್ಯ ಹಿರೇಗೌಡರ, ಶಶಿಕುಮಾರ ಕಂದಕೂರ, ಬಸುಕುಮಾರ ಕೊಪ್ಪದ, ಶಿವಕುಮಾರ ಕುಂಬಾರ, ಭಾಗ್ಯಶ್ರೀ ಎಚ್, ವೃಂದಾ ಶೇಠ, ಸುಂದರಾ ಜ್ಯೋಷಿ, ಬಿ.ಪೂರ್ಣಿಮಾ ಇದ್ದರು.