

ಯಲಬುರ್ಗಾ: ಪಾಕಿಸ್ತಾನದ ಉಗ್ರರ ಅಡು ತಾಣಗಳನ್ನು ಹೊಡೆದುರುಳಿಸುವ ಮೂಲಕ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಆಗಿದೆ ಎಂದು ಬಿಜೆಪಿ ಮುಖಂಡ ವೀರಣ್ಣ ಹುಬ್ಬಳ್ಳಿ ಹೇಳಿದರು.
ಭಾರತೀಯ ಸೇನೆಗೆ ಒಳಿತಾಗಲಿ ಎಂದು ಪಟ್ಟಣದ ನಾಗರಿಕರಿಂದ ಶ್ರೀ ವಿಜಯ ದುರ್ಗಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಪೂಜೆ ಸಲ್ಲಿಸಿ ಮಾತನಾಡಿದರು.
ದೇಶದ ಸುರಕ್ಷತೆ, ಭದ್ರತೆಗಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಿ ಉಗ್ರರ ತಾಣಗಳನ್ನು 25 ನಿಮಿಷದಲ್ಲೇ ಸದೆ ಬಡಿದಿದೆ. ದಿಢೀರ್ ಏರ್‌ಸ್ಟ್ರೈಕ್‌ಗೆ ಪಾಕ್ ಸೇನೆ ಬೆಚ್ಚಿಬಿದ್ದಿದೆ ಎಂದರು.
ಮಾಜಿ ಸೈನಿಕ ಮಂಜುನಾಥ ಬಡಿಗೇರ ಮಾತನಾಡಿ, ಪಾಕ್ ನೆಲಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದರು.
ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸದಸ್ಯರಾದ ದೊಡ್ಡಯ್ಯ ಗುರುವಿನ, ಕಳಕಪ್ಪ ತಳವಾರ, ಬಸವಲಿಂಗಪ್ಪ ಕೊತ್ತಲ, ಮುಖಂಡರಾದ ಅಂದನಗೌಡ ಉಳ್ಳಾಗಡ್ಡಿ, ಸುರೇಶಗೌಡ ಶಿವನಗೌಡ ಹಾಗೂ ಮಾಜಿ ಸೈನಿಕರು ಇದ್ದರು.