

ಯಲಬುರ್ಗಾ: ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಚಿಕಿತ್ಸೆ ಪಡೆಯದಿದ್ದರೆ ಬೇರೆಯವರಿಗೆ ಹರಡುವ ಸಾಧ್ಯತೆ ಇರುತ್ತದೆ ಎಂದು ಟಿಎಚ್‌ಒ ಮಂಜುನಾಥ ಬ್ಯಾಲಹುಣಸಿ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಕ್ಷಯ ಜಾಗೃತಿ ಜಾಥಾ ಹಾಗೂ ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷಯದ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕು. ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು. ಕ್ಷಯ ಮುಕ್ತ ತಾಲೂಕು ಮಾಡಲು ಎಲ್ಲರೂ ಕೈ ಜೋಡಿಸಬೇಕು. ಕ್ಷಯದ ಲಕ್ಷಣಗಳು ಕಂಡು ಬಂದರೆ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದರು.
ಮುಖ್ಯ ವೈದ್ಯಾಧಿಕಾರಿ ವಿ.ಪ್ರಕಾಶ, ವೈದ್ಯಾಧಿಕಾರಿಗಳಾದ ಸಂಗನಬಸಪ್ಪ, ಶೇಖರ ಭಜಂತ್ರಿ, ಆರೋಗ್ಯ ಸಹಾಯಕರಾದ ಚನ್ನಬಸಯ್ಯ ಹಿರೇಮಠ, ಅಶೋಕ ಆಲೂರು, ಇಮ್ತಿಯಾಜ್, ಕಾಳಪ್ಪ ಬಡಿಗೇರ್, ಪ್ರವೀಣಕುಮಾರ್, ಶ್ರೀದೇವಿ ಅಪ್ಪನಗೌಡ್ರ, ಶಿಲ್ಪಾ ಭಜಂತ್ರಿ, ಅರುಣಕುಮಾರ್ ಹಿರೇಮಠ, ಆಶಾ ಕಾರ್ಯಕರ್ತೆಯರು ಮತ್ತು ಇತರರಿದ್ದರು.