20 ಬಸ್‌ಗಳ ಸಂಚಾರ ಆರಂಭ

18042021 Yelburga bus start
Published on

ಯಲಬುರ್ಗಾ: ಆರನೇ ವೇತನ ಆಯೋಗದ ಶಿಫಾರಸುಗಳ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 12 ದಿನ ಪೂರೈಸಿದೆ.

ಪಟ್ಟಣದ ಡಿಪೋದಲ್ಲಿ ಭಾನುವಾರ 40 ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದರು. ಇದರಿಂದಾಗಿ 20 ಬಸ್‌ಗಳು ಸಂಚರಿಸಿದವು. ಕೊಪ್ಪಳ, ಕನಕಗಿರಿ, ಕುಕನೂರು, ಕುಷ್ಟಗಿ, ಗಜೇಂದ್ರಗಡ, ಗದಗ, ಗಂಗಾವತಿ ಸೇರಿ ನಾನಾ ಮಾರ್ಗದಲ್ಲಿ ಬಸ್‌ಗಳು ಸಂಚರಿಸಿದವು. ಯಲಬುರ್ಗಾ ಡಿಪೋದಿಂದ ಶೇ.80 ಬಸ್‌ಗಳು ಸಂಚಾರ ಆರಂಭಿಸಿವೆ. ಪೂರ್ಣ ಪ್ರಮಾಣದಲ್ಲಿ ನೌಕರರು ಕೆಲಸಕ್ಕೆ ಹಾಜರಾಗುವ ವಿಶ್ವಾಸ ಇದೆ ಎಂದು ಘಟಕ ವ್ಯವಸ್ಥಾಪಕ ರಮೇಶ ಚಿಣಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net