ಸಾರಿಗೆ ಬಸ್ ಪಲ್ಟಿಯಾಗಿ ಐವರಿಗೆ ಗಾಯ

Yalaburga Bus Roll 5 Injured
ಕೆಂಪುಕೆರೆ ಬಳಿ ಶುಕ್ರವಾರ ಪಲ್ಟಿಯಾದ ಸಾರಿಗೆ ಬಸ್.
Published on

ಯಲಬುರ್ಗಾ: ಪಟ್ಟಣದ ಕೆಂಪುಕೆರೆ ಹತ್ತಿರ ಸಾರಿಗೆ ಬಸ್ ಪಲ್ಟಿಯಾಗಿ ಐವರು ಶುಕ್ರವಾರ ಗಾಯಗೊಂಡಿದ್ದಾರೆ. ಯಲಬುರ್ಗಾ ಸಾರಿಗೆ ಘಟಕದ ಬಸ್, ಹೊಸಳ್ಳಿ ಮಾರ್ಗವಾಗಿ ಗಜೇಂದ್ರಗಡಕ್ಕೆ ತೆರಳುತ್ತಿತ್ತು. ಕೆಂಪುಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಪಕ್ಕದ ಕಂದಕಕ್ಕೆ ಉರುಳಿದೆ. ಬಸ್‌ನಲ್ಲಿ 24 ಪ್ರಯಾಣಿಕರಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ವೆಚ್ಚ ಸಾರಿಗೆ ಇಲಾಖೆಯೇ ಭರಿಸುತ್ತಿದ್ದು, ಪರಿಹಾರ ಕೊಡಲಾಗುವುದು ಎಂದು ಸಾರಿಗೆ ಘಟಕ ವ್ಯವಸ್ಥಾಪಕ ರಮೇಶ ಚಿಣಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net