

ಯಲಬುರ್ಗಾ: ಟ್ರಾಕ್ಟರ್ ಪಲ್ಟಿಯಾಗಿ ತಾಲೂಕಿನ ಹೊಸುರ ಗ್ರಾಮದ ರೈತರೊಬ್ಬರು ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ದೇ ಗ್ರಾಮದ ರೈತ ಪ್ರವೀಣ ವೀರಭದ್ರಗೌಡ ಮಾಲಿಪಾಟೀಲ (32) ಮೃತ ರೈತರು. ತಮ್ಮ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಬರುವಾಗ ಟ್ರಾೃಕ್ಟರ್ ಪಲ್ಟಿಯಾಗಿದ್ದರಿಂದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.