

ಯಲಬುರ್ಗಾ: ಆಕಸ್ಮಿಕ ಬೆಂಕಿಯಿಂದಾಗಿ ತಾಲೂಕಿನ ಕಲಕಬಂಡಿ ಗ್ರಾಮದ ರೈತರಾದ ದುರಗಮ್ಮ ಸಣ್ಣ ಹನುಮಪ್ಪ ಹರಿಜನ್ ಹಾಗೂ ಕರಿಬಸನಗೌಡ ಲಿಂಗನಗೌಡ ಮೇವಾಡಿ, ಬಸವರಾಜ ಕಟ್ಟಿಮನಿಗೆ ಸೇರಿದ ತಲಾ 5 ಎಕರೆ ತೊಗರಿ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಸ್ಥಳಕ್ಕೆ ಕುಷ್ಟಗಿಯ ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಅನಾಹುತ ತಪ್ಪಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಸಿಬ್ಬಂದಿ ಶಿವಾಜಿರಾವ್, ನಂದೀಶ ಹೂಗಾರ್, ಪ್ರವೀಣಕುಮಾರ್, ಅನಿಲ್ ವಡ್ಡರ್, ರಾಜಾ ಇದ್ದರು.