ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ಕೊಡಿ

Appeal for Grant temple
ಯಲಬುರ್ಗಾದ ಉಗ್ರಮರಿಯಮ್ಮ ದೇವಿ ಹಾಗೂ ದುರ್ಗಾದೇವಿ ದೇವಸ್ಥಾನಗಳ ಜೀಣೋದ್ಧಾರಕ್ಕೆ ಐದು ಲಕ್ಷ ರೂ. ಅನುದಾನ ಮಂಜೂರು ಮಾಡುವಂತೆ ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು ಶಾಸಕ ಹಾಲಪ್ಪ ಆಚಾರ್‌ಗೆ ಶನಿವಾರ ಮನವಿ ಸಲ್ಲಿಸಿದರು.
Published on

ಯಲಬುರ್ಗಾ: ಪಟ್ಟಣದ ಉಗ್ರ ಮರಿಯಮ್ಮ ದೇವಿ ಹಾಗೂ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಐದು ಲಕ್ಷ ರೂ. ಅನುದಾನ ನೀಡುವಂತೆ ಒತ್ತಾಯಿಸಿ ಎರಡೂ ದೇವಸ್ಥಾನಗಳ ಸೇವಾ ಸಮಿತಿ ಪದಾಧಿಕಾರಿಗಳು ಶಾಸಕ ಹಾಲಪ್ಪ ಆಚಾರ್‌ಗೆ ಶನಿವಾರ ಮನವಿ ಸಲ್ಲಿಸಿದರು.

ಪಟ್ಟಣದ ಎರಡೂ ದೇವಸ್ಥಾನಗಳ ಕಾಮಗಾರಿ ಅನುದಾನದ ಕೊರತೆಯಿಂದ ಅಪೂರ್ಣಗೊಂಡಿವೆ. ಗುಡಿ ಹಾಗೂ ಗೋಪುರ ಕಾಮಗಾರಿಗೆ ಅನುದಾನ ನೀಡಬೇಕೆಂದು ಕೋರಲಾಯಿತು. ಸೇವಾ ಸಮಿತಿ ಅಧ್ಯಕ್ಷ ವಸಂತ ಬಾವಿಮನಿ, ಉಪಾಧ್ಯಕ್ಷ ಚಂದ್ರಪ್ಪ ದೊಡ್ಡಮನಿ, ಕಾರ್ಯದರ್ಶಿ ಈರಪ್ಪ ಬಣಕಾರ, ಪದಾಧಿಕಾರಿಗಳಾದ ರಮೇಶ ಬಣಕಾರ, ಶಂಕರ ಬಾವಿಮನಿ, ಸುರೇಶ ನಡುಲಮನಿ, ಹೇಮಣ್ಣ ಪೂಜಾರ, ಸುರೇಶ ಬಾವಿಮನಿ, ಮಲ್ಲಿಕಾರ್ಜುನ ಹಣಗಿ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net