ಮಕ್ಕಳಿಗೆ ಆರೋಗ್ಯ ಕಾಳಜಿ ಅಗತ್ಯ

Blood Group Checkup Free Camp
ಯಲಬುರ್ಗಾ ತಾಲೂಕಿನ ಹಿರೇಅರಳಿಹಳ್ಳಿ ಬನಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಿತು. ವೈದ್ಯಾಧಿಕಾರಾದ ಪ್ರವೀಣ, ಬಸವರಾಜ ಇಲಾಳ, ಗವಿಶ್ರೀ ಲ್ಯಾಬ್‌ನ ಶರಣು ದಾನನಗೌಡ್ರ ಇದ್ದರು.
Published on

ಯಲಬುರ್ಗಾ: ಪ್ರತಿ ವಿದ್ಯಾರ್ಥಿಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಬನಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶೇಖರಗೌಡ ರಾಮತ್ನಾಳ ಹೇಳಿದರು.

ತಾಲೂಕಿನ ಹಿರೇಅರಳಿಹಳ್ಳಿಯ ಬನಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಷ್ಟಗಿಯ ಗವಿಶ್ರೀ ರಕ್ತ ತಪಾಸಣಾ ಕೇಂದ್ರದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ರಕ್ತದ ಗುಂಪು ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.

ಸ್ವಸ್ಥ ಸಮಾಜ ನಿರ್ಮಾಣ ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಗಳು ಹಲವಾರು ಯೋಜನೆ ಜಾರಿಗೊಳಿಸಿವೆ. ಮಕ್ಕಳು ಹೆಚ್ಚು ತರಕಾರಿ, ಪೋಷಕಾಂಶ ಭರಿತ ಊಟ ಸೇವಿಸಬೇಕು. ರಕ್ತದಾನ ಬಗ್ಗೆ ತಿಳಿಯಲು ರಕ್ತದ ಮಾದರಿ ತಪಾಸಣೆ ಉಪಯುಕ್ತವಾಗಿದೆ ಎಂದರು.

ವೈದ್ಯಾಧಿಕಾರಿ ಡಾ.ಬಸವರಾಜ ಇಲಾಳ ಮಾತಮಾಡಿ, ಮಕ್ಕಳು ಆರೋಗ್ಯದ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು. ರಕ್ತದ ಮಾದರಿ ಮಹತ್ವ ಮತ್ತು ಹೆಣ್ಣು ಮಕ್ಕಳ ಆರೋಗ್ಯ ಕುರಿತು ಆರೋಗ್ಯ ಸಿಬ್ಬಂದಿ ಶೋಭಾ ಪತ್ತಾರ ಮಾಹಿತಿ ನೀಡಿದರು. ವೈದ್ಯಾಧಿಕಾರಿ ಪ್ರವೀಣ, ಗವಿಶ್ರೀ ಲ್ಯಾಬ್‌ನ ಶರಣು ದಾನನಗೌಡ್ರ, ಶಿಕ್ಷಕರಾದ ಪ್ರವೀಣಕುಮಾರ, ಆದೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net