ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲಿ- ಸಿದ್ದಲಿಂಗಪ್ಪ ಶ್ಯಾಗೋಟಿ ಕಿವಿಮಾತು

Thippanala School
ತಿಪ್ಪನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತಿ ವೀರೇಶ ಕುರಿ, ಶಂಕರ ಹಳ್ಳಿಯನ್ನು ಸನ್ಮಾನಿಸಲಾಯಿತು.
Published on

ಯಲಬುರ್ಗಾ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಆಗುವುದರ ಜತೆಗೆ ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಹೇಳಿದರು.

ತಿಪ್ಪನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬಂಧು ಸೇವಾ ಗುರುಬಳಗ ಸೋಮವಾರ ಏರ್ಪಡಿಸಿದ್ದ ವಿವಿಧ ವಸತಿ ಶಾಲೆಯ 6ನೇ ತರಗತಿ ಪ್ರವೇಶ ಪರೀಕ್ಷೆ ಕುರಿತ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು. ಬಳಗದಿಂದ ಶಾಲಾ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಲಾಗುತ್ತಿದೆ ಎಂದರು. ಶಿಕ್ಷಕ ಶಂಕರ ಹಳ್ಳಿ ಹಾಗೂ ಸಾಹಿತಿ ವೀರೇಶ ಕುರಿ ಮಾತನಾಡಿದರು. ಬಳಗದ ಸಿದ್ದಪ್ಪ ಸಜ್ಜಗಾರ, ಫಕೀರಗೌಡ ಮಾಲಿಪಾಟೀಲ್, ಮಹೇಶ, ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ವಿಜೇತ ವಿಶ್ವನಾಥ ಹಡಪದ, ಮಾರ್ಗದರ್ಶಿ ಶಿಕ್ಷಕ ಮಹೇಶ, ಮುಖ್ಯಶಿಕ್ಷಕ ಫಕೀರಗೌಡ ಮಾಲಿಪಾಟೀಲ್, ಮೈಲಾರಪ್ಪ, ಸಹಾಯಕ ಪ್ರಾಧ್ಯಾಪಕ ಶಂಕರ ಹಳ್ಳಿ, ಸಾಹಿತಿ ವೀರೇಶ ಕುರಿ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ನಾಗರಾಜ ಪಟಗಾರ, ಸಂಗಯ್ಯ ಹಿರೇಮಠ, ಶಂಕರ್ ಇಂಗಳದಾಳ, ಪ್ರಭು ಶಿವನಗೌಡ್ರ, ಪರಮೇಶ ಚಿಂತಾಮಣಿ, ಮಹೇಂದ್ರ, ಶಿವಕುಮಾರ ಹೊಂಬಳ, ಮರ್ದಾನ್‌ಸಾಬ್ ನದಾಫ್, ವಿನಾಯಕ ನಾಯ್ಕ, ವಸಂತಕುಮಾರ, ಶಿವರುದ್ರಪ್ಪ, ದೊಡ್ಡಬಸನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net