

ಯಲಬುರ್ಗಾ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಅಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೆಯುಡಬ್ಲುೃಜೆ ತಾಲೂಕು ಘಟಕ ತಹಸೀಲ್ದಾರ್ ಬಸವರಾಜ ತೆನ್ನಳ್ಳಿಗೆ ಗುರುವಾರ ಮನವಿ ಸಲ್ಲಿಸಿತು.
ಸಂಘದ ತಾಲೂಕು ಅಧ್ಯಕ್ಷ ಶಿವಮೂರ್ತಿ ಇಟಗಿ, ಕಾರ್ಯದರ್ಶಿ ಮಲ್ಲು ಮಾಟರಂಗಿ ಮಾತನಾಡಿ, ಕೆಯುಡಬ್ಲುೃಜೆ ಅಧ್ಯಕ್ಷ ಶಿವಾನಂದ ತಗಡೂರು ವಿರುದ್ಧ ಮಲ್ಲಿಕಾರ್ಜುನ ಬಂಗ್ಲೆ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡುತ್ತಿದ್ದಾರೆ. ಡಿವಿಜಿ ಅವರಿಂದ ಸ್ಥಾಪಿತವಾದ ಸಂಘದ ಅಧ್ಯಕ್ಷರಾಗಿ ತಗಡೂರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕರೊನಾ ಸಂದರ್ಭ ಮೃತಪಟ್ಟ ಮತ್ತು ಅನಾರೋಗ್ಯಕ್ಕೆ ತುತ್ತಾದ ಪತ್ರಕರ್ತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತ ಕೆಲಸ ಮಾಡಿದ್ದಾರೆ.
ಸಂಘವು ರಾಜ್ಯದಲ್ಲಿ ಕ್ರಿಯಾಶೀಲತೆಯಿಂದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಇದನ್ನು ಸಹಿಸದೆ ಬಂಗ್ಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಸಂಘಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದ ಬಂಗ್ಲೆ ವಿರುದ್ಧ ಸಿಎಂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಇಮಾಮ್‌ಸಾಬ್ ಸಂಕನೂರ, ಪದಾಧಿಕಾರಿಗಳಾದ ಸಂತೋಷ ಬಂಡ್ರಿ, ಅನಿಲ ಕಲ್ಬಾವಿ, ಸ.ಶರಣಪ್ಪ ಪಾಟೀಲ, ಮಹಾಂತೇಶ ಛಲವಾದಿ, ಚಂದ್ರಶೇಖರ ಮರದಡ್ಡಿ, ರವಿಕುಮಾರ್ ಛಲವಾದಿ, ದೇವರಾಜ ದೊಡ್ಮನಿ, ವೀರೇಶ ಸ್ಟಾಂಪಿನ, ದೊಡ್ಡಬಸಪ್ಪ ಹಕಾರಿ, ಶಿವಕುಮಾರ ಮ್ಯಾಗೇರಿ ಇತರರಿದ್ದರು.