

ಯಲಬುರ್ಗಾ: ಪಟ್ಟಣದ ನೂರು ಹಾಸಿಗೆ ಸರ್ಕಾರಿ ಸ್ಪತ್ರೆಯಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ವತಿಯಿಂದ ಗುರುವಾರ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಗಣೇಶ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.
ಶ್ರೀಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯ ಜರುಗಿದವು. ಅಷ್ಟ ದಳದ ಪದ್ಮ ರಂಗೋಲಿ ಹಾಕಿ, ನಂತರ ಗಂಗಾ ಜಲ ಸಿಂಪಡಿಸಿ ಗಣೇಶನಿಗೆ ಹೂವು, ಧೂಪ, ಮೋದಕ ಮುಂತಾದವುಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿ ಗಣೇಶ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.
ಇದನ್ನೂ ಓದಿ: ಹೇಮಾವತಿ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ
ಆರೋಗ್ಯ ರಕ್ಷಾ ಸಮಿತಿ ಉಪಾಧ್ಯಕ್ಷ ಡಾ.ಶಿವನಗೌಡ ದಾನರಡ್ಡಿ, ಸದಸ್ಯರಾದ ಅಬ್ದುಲ್ ಮುನಾಫ್, ವಿ.ಎಸ್. ಶಿವಪ್ಪಯ್ಯನ ಮಠ, ಪಪಂ ಸದಸ್ಯೆ ಡಾ.ನಂದಿತಾ ದಾನರಡ್ಡಿ, ಮುಖ್ಯ ವೈದ್ಯಾಧಿಕಾರಿ ಕೃಷ್ಣ ಹೊಟ್ಟಿ, ಪ್ರಮುಖರಾದ ಡಾ.ಶೇಖರ ಭಜಂತ್ರಿ, ಎಚ್.ಸಿ. ರಾಮದುರ್ಗ, ಮಲ್ಲಯ್ಯ ಹಿರೇಮಠ, ಸಿದ್ದಯ್ಯ ಕೊಣ್ಣೂರ ಮಠ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷ ಚನ್ನಮ್ಮ ಆರ್. ಪಾಟೀಲ್, ಕಾರ್ಯದರ್ಶಿ ಸುನೀತಾ ಪತಂಗರಾಯ ಇತರರಿದ್ದರು.