ಕೆಟ್ಟದನ್ನು ಪ್ರೋತ್ಸಾಹಿಸುವವರೇ ಹೆಚ್ಚು

SABHE
ಹಿರೇಮ್ಯಾಗೇರಿಯಲ್ಲಿ ಎಸ್‌ಕೆಡಿಆರ್‌ಡಿಪಿ ಟ್ರಸ್ಟ್ ಹಮ್ಮಿಕೊಂಡಿದ್ದ 1753ನೇ ಮದ್ಯವರ್ಜನ ಶಿಬಿರವನ್ನು ಶ್ರೀ ವಿಜಯ ಮಹಾಂತೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ತಳವಾರ್, ಜಿಪಂ ಮಾಜಿ ಸದಸ್ಯ ಸಿ.ಎಚ್.ಪಾಟೀಲ್, ಪ್ರಮುಖರಾದ ಮಂಜುನಾಥ ಬೇಲೇರಿ, ಎಂ.ಎಸ್.ಹೊಟ್ಟಿನ, ಶಕುಂತಲಾ ಪಾಟೀಲ್, ಶರಣಬಸಪ್ಪ, ವೀರಣ್ಣ ಇದ್ದರು.
Published on

ಯಲಬುರ್ಗಾ: ಸಮಾಜದಲ್ಲಿ ಗೌರವಯುತ ಬದುಕು ನಡೆಸಬೇಕಾದರೆ ದುಶ್ಚಟಗಳಿಂದ ದೂರವಿರಬೇಕು ಎಂದು ಕುದರಿಮೋತಿಯ ಮೈಸೂರು ಮಠದ ಶ್ರೀ ವಿಜಯ ಮಹಾಂತೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಹಿರೇಮ್ಯಾಗೇರಿ ಸಮುದಾಯ ಭವನದಲ್ಲಿ ಎಸ್‌ಕೆಡಿಆರ್‌ಡಿಪಿ ಟ್ರಸ್ಟ್ ಗುರುವಾರ ಹಮ್ಮಿಕೊಂಡಿದ್ದ 1753ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು. ಸಮಾಜದಲ್ಲಿ ಕೆಟ್ಟ ಚಟಗಳಿಗೆ ದೂಡುವ ಮತ್ತು ಪ್ರೋತ್ಸಾಹಿಸುವವರೇ ಹೆಚ್ಚಿದ್ದಾರೆ. ಆದರೆ ಧರ್ಮಸ್ಥಳ ಸಂಸ್ಥೆ ಮದ್ಯದ ಚಟಕ್ಕೆ ಬಲಿಯಾದವರನ್ನು ಬಿಡಿಸಿ ಒಳ್ಳೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ತಾಲೂಕಿನಲ್ಲಿ ಸಂಸ್ಥೆಯಿಂದ ಸಾವಿರಾರು ಜನರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಆರ್ಥಿಕವಾಗಿ ಸವಲರಾಗಲು ಅನುಕೂಲ ಕಲ್ಪಿಸಲಾಗಿದೆ. ಜತೆಗೆ ಸಾಲಗಾರರಿಗೆ ವಿಮೆ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

30 ಜನ ಮದ್ಯವ್ಯಸನಿಗಳು ಮದ್ಯ ತ್ಯಜಿಸಲು ಪ್ರೇರೇಪಿತಗೊಂಡು ಸಭೆಯಲ್ಲಿ ಭಾಗವಹಿಸಿದ್ದರು. ಯೋಜನಾಧಿಕಾರಿ ಟಿ.ಸತೀಶ ,ಪ್ರಮುಖರಾದ ಗುರಪ್ಪ ಗುರಿಕಾರ, ಹನುಮಂತಪ್ಪ ಬೇರಗಿ, ಶಿವಪುತ್ರಪ್ಪ ಮಲಿಗೋಡದ, ಶರಣಪ್ಪ ಗಾಣಗೇರ, ರಾಯಪ್ಪ ಮಾಡಲಗೇರಿ, ಮಹಾಂತೇಶ ಗಾಣಿಗೇರ, ತಿಪ್ಪಣ್ಣ, ಶಿವರಾಯಪ್ಪ, ಮರಿತಿಮ್ಮಪ್ಪ, ಖಾಜಾಮೈನುದ್ದೀನ್ ಅಮರಾವತಿ, ಕಲ್ಲನಗೌಡ ಪಾಟೀಲ್, ನಾಗೇಶ, ಗೀತಾ, ಶ್ರೀದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net