ಧಾರ್ಮಿಕ ಕಾರ್ಯಕ್ರಮಗಳು ಭಾವೈಕ್ಯತೆಗೆ ಸಾಕ್ಷಿ: ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಆಶೀರ್ವಚನ

06092022 Yelburga purana mangala
Published on

ಯಲಬುರ್ಗಾ: ಹಬ್ಬ, ಹರಿದಿನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ, ಭಾವೈಕ್ಯತೆಗೆ ಸಾಕ್ಷಿಯಾಗಿವೆ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು.

ಶ್ರಾವಣ ಮಾಸದ ಪ್ರಯುಕ್ತ ಪಟ್ಟಣದ ಶ್ರೀಧರಮುರಡಿ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವದಲ್ಲಿ ಸೋಮವಾರ ಮಾತನಾಡಿದರು. ಕಲಬುರ್ಗಿ ಶರಣರ ಪುರಾಣ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಶ್ರೀಧರಮುರಡಿ ಹಿರೇಮಠದಲ್ಲಿ 41 ದಿನ ಪುರಾಣ ಪ್ರವಚನ ಮೂಲಕ ಭಕ್ತರಿಗೆ ಅಧ್ಯಾತ್ಮದ ಅರಿವು ಉಣಬಡಿಸಿರುವುದು ಹೆಮ್ಮೆಯ ಸಂಗತಿ. ಸರ್ವರ ಒಳಿಗಾಗಿ ಬಸವಲಿಂಗೇಶ್ವರ ಶ್ರೀಗಳು ಶ್ರಮಿಸುತ್ತಿದ್ದಾರೆ ಎಂದರು.

ಶ್ರೀಮಠದಲ್ಲಿ ಬೆಳಗ್ಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಎತ್ತಿನ ಚಕ್ಕಡಿಯಲ್ಲಿ ಬಸವಲಿಂಗೇಶ್ವರ ಸ್ವಾಮೀಜಿ, ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಬೇನಾಳದ ಸದಾಶಿವ ಶ್ರೀಗಳ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರಿಂದ ಕುಂಭ ಕಳಸ, ಯುವಕರಿಂದ ಕೋಲಾಟ ಹಾಗೂ ವಿವಿಧ ವಾದ್ಯ ಮೇಳ ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ಸದಸ್ಯ ಬಸಲಿಂಗಪ್ಪ ಕೊತ್ತಲ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಈಶಪ್ಪ ಸ್ಟಾಂಪಿನ, ಬಸವರಾಜ ಸಾದರ, ಮಲ್ಲಪ್ಪ ಭೂತೆ, ಬಾಳನಗೌಡ ಸಣ್ಣಗೌಡ್ರ, ಮಹಾಂತೇಶ ಭಾಸ್ಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net