ಆನೆ ಮೇಲೆ ಅಂಬಾರಿಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ಭಾವಚಿತ್ರದ ಮೆರವಣಿಗೆ

09022020 Yelabaruga Yellamma Devi Jatre
Published on

ಯಲಬುರ್ಗಾ: ಪಟ್ಟಣದ ಒಂದನೇ ವಾರ್ಡ್‌ನಲ್ಲಿ ಭಾರತ ಹುಣ್ಣಿಮೆ ನಿಮಿತ್ತ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ದೇವಸ್ಥಾನದಲ್ಲಿ ರೇಣುಕಾ ದೇವಿ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ಮುತ್ತೈದೆಯರು ಉಡಿ ತುಂಬಿ ಸಂಭ್ರಮಿಸಿದರು. ದೇವರಿಗೆ ನೈವೇದ್ಯ ಸಮರ್ಪಿಸಲಾಯಿತು.

ಶ್ರೀ ದೇವಿ ಭಾವಚಿತ್ರದ ಮೆರವಣಿಗೆಗೆ ಪಪಂ ಸದಸ್ಯ ಕಲಾವತಿ ವೀರಪ್ಪ ಮರದಡ್ಡಿ ಚಾಲನೆ ನೀಡಿದರು. ಮಾತೆಯ ಭಾವಚಿತ್ರವನ್ನು ಆನೆ ಮೇಲೆ ಅಂಬಾರಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಾದ್ಯ ವೃಂದಗಳು ಶೋಭೆ ಹೆಚ್ಚಿಸಿದರು.

ಶ್ರೀ ರೇಣುಕಾ ಯಲ್ಲಮ್ಮದೇವಿ ಯುವಕ ಮಂಡಳ ಅಧ್ಯಕ್ಷ ಮಲ್ಲಪ್ಪ ಸುರಕೋಡ, ಪಪಂ ಸದಸ್ಯರಾದ ಅಂದಯ್ಯ ಕಳ್ಳಿಮಠ, ಸಿದ್ರಾಮೇಶ ಬೆಲೇರಿ, ವಸಂತ ಬಾವಿಮನಿ, ಹನುಮಂತ ಭಜಂತ್ರಿ, ಕಳಕಪ್ಪ ತಳವಾರ್ ಪ್ರಮುಖರಾದ ಅಮರಪ್ಪ ಕಲಬುರ್ಗಿ, ಕಲ್ಲಪ್ಪ ಕರಮುಡಿ, ಈರಪ್ಪ ಬಣಕಾರ್, ಶಿವರಾಜ ಕುಂಬಾರ, ವಿರೇಶ ಬಳಿಗಾರ್, ಶರಣಯ್ಯ ಜಡಿಮಠ, ಕಲ್ಲಪ್ಪ ಹುಗಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net