ಮಣ್ಣಿನ ರಕ್ಷಣೆಗೆ ಸಾವಯವ ಗೊಬ್ಬರ ಬಳಸಿ

251122 Bevur One Day Trade Workshop
ಬೇವೂರಲ್ಲಿ ಒಂದು ದಿನದ ವಹಿವಾಟು ಕಾರ್ಯಾಗಾರವನ್ನು ಜಿಲ್ಲಾ ಕೃಷಿ ಉಪನಿರ್ದೇಶಕ ಸಹದೇವ ಯರಗೊಪ್ಪ ಉದ್ಘಾಟಿಸಿದರು.
Published on

ಯಲಬುರ್ಗಾ: ಕೃಷಿಯಲ್ಲಿ ಸಾವಯವ ಗೊಬ್ಬರ ಹೆಚ್ಚು ಬಳಸುವ ಮೂಲಕ ಮಣ್ಣಿನ ಸತ್ವ ಉಳಿಸಬೇಕು ಎಂದು ಜಿಲ್ಲಾ ಕೃಷಿ ಉಪನಿರ್ದೇಶಕ ಸಹದೇವ ಯರಗೊಪ್ಪ ಹೇಳಿದರು. ಬೇವೂರು ಗ್ರಾಮದಲ್ಲಿ ಸಂಗನಬಸವ ರೈತ ಉತ್ಪಾದಕರ ಕಂಪನಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ವಹಿವಾಟು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಶೇ.90 ರೈತರು ಕೃಷಿ ಭೂಮಿಯಲ್ಲಿ ವಿಷಪೂರಿತ ಆಹಾರ ಉತ್ಪಾದನೆ ಮಾಡುತ್ತಿರುವುದರಿಂದ ಜನರಲ್ಲಿ ಅನಾರೋಗ್ಯ ಹೆಚ್ಚಾಗಲು ಕಾರಣವಾಗಿದ್ದು, ಇದು ಕೃಷಿಗೆ ಅಂಟಿಕೊಂಡ ಅಪರಾಧ ಎಂದು ಕಳವಳ ವ್ಯಕ್ತಪಡಿಸಿದ ಅವರು, ರೈತರು ಸಾವಯವ ಗೊಬ್ಬರ ಕಡೆಗೆ ಗಮನ ಹರಿಸಿ ಆರೋಗ್ಯವಂತ ದೇಶ ಕಟ್ಟಲು ಮುಂದಾಗಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಮಾತನಾಡಿ, ತಾಲೂಕಿನ ರೈತರು ಸರ್ಕಾರದ ಸೌಲಭ್ಯದ ಜತೆಗೆ ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ವಹಿವಾಟು ನಡೆಸುವುದರಿಂದ ಉತ್ತಮ ಲಾಭ ಪಡೆಯಬಹುದು ಎಂದು ತಿಳಿಸಿದರು.

ಸಹರಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಅಲ್ಲಾಗಿರಿರಾಜ್ ಕನಕಗಿರಿ ಮಾತನಾಡಿದರು. ಪ್ರವೀಣ ಸಜ್ಜನ, ವೀರೇಶ ನಾಡಿಗೇರ ತರಬೇತಿ ನೀಡಿದರು. ಪ್ರಮುಖರಾದ ಹನುಮಂತಪ್ಪ ಮೇಟಿ, ಸುಮಿತ್ರಾ ಬಡಿಗೇರ, ಡಿ.ಕೆ.ಗೊಂದಿ, ಎನ್.ಎಸ್.ತಾವರಗೇರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net