ಮಾನವರಾಗಿ ಹುಟ್ಟಿ ದೇವರಾದವರ ಚರಿತ್ರೆ ಅಜರಾಮರ

SABHE
ಯಲಬುರ್ಗಾ ತಾಲೂಕಿನ ದಮ್ಮೂರು ಶ್ರೀ ಭೀಮಾಂಬಿಕಾ ಮಠದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಪತ್ರಕರ್ತ ಕೊಟ್ರಪ್ಪ ತೋಟದ ಮಾತನಾಡಿದರು. ಮಠದ ಒಡೆಯ ಹನುಮಂತಪ್ಪಜ್ಜ ಧರ್ಮರ, ಗಣ್ಯರಾದ ರಸೂಲ್‌ಸಾಬ್ ಹಿರೇಮನಿ, ಬಸವರಾಜ ಪ್ರಭಣ್ಣನವರ, ಮುತ್ತಪ್ಪ ಪುರ್ತಗೇರಿ, ಈರಪ್ಪ ಇದ್ದರು.
Published on

ಯಲಬುರ್ಗಾ: ಶಿವಶರಣರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ ಹೇಳಿದರು.

ತಾಲೂಕಿನ ದಮ್ಮೂರು ಗ್ರಾಮದ ಶ್ರೀ ಭೀಮಾಂಬಿಕಾ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.

ಇಟಗಿ ಭೀಮಾಂಬಿಕಾ ದೇವಿಯ ಮಹಾಚರಿತ್ರೆ ತಿಳಿದುಕೊಂಡಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ವೃದ್ಧಿಯಾಗುತ್ತದೆ. ಮಾನವರಾಗಿ ಹುಟ್ಟಿ ದೇವರಾದವರ ಚರಿತ್ರೆ ಅಜರಾಮರ. ಅಹಂಕಾರ ಬಿಟ್ಟು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ಮಾನಸಿಕ ಒತ್ತಡ ನಿವಾರಣೆಗೆ ಶಿವಾನುಭವ ಗೋಷ್ಠಿ ಸಹಕಾರಿಯಾಗಿದೆ ಎಂದರು.

ಭೀಮಾಂಬಿಕಾ ಮಠದ ಒಡೆಯ ಹನುಮಂತಪ್ಪಜ್ಜ ಧರ್ಮರ, ಪ್ರಮುಖರಾದ ರಸೂಲ್‌ಸಾಬ್ ಹಿರೇಮನಿ, ಬಸವರಾಜ ಪ್ರಭಣ್ಣನವರ, ಮುತ್ತಪ್ಪ ಪುರ್ತಗೇರಿ, ಈರಪ್ಪ ಕರಿಗಾರ, ಮೌನೇಶ ಬಡಿಗೇರ, ನೀಲಕಂಠಪ್ಪ ರೊಡ್ಡರ, ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ, ಎಸ್.ವೈ. ಬಸಾಪುರ, ಸಿದ್ದಮ್ಮ ಹಳ್ಳಿಕೇರಿ, ಶರಣಪ್ಪ ದಾನಕೈ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net