ನೀತಿ ಸಂಹಿತೆ ನಿಬಂಧನೆಗೊಳಪಟ್ಟು ವ್ಯಾಪಾರ ನಡೆಸಿ

31 Ylb 01
Published on

ಯಲಬುರ್ಗಾ: ಎಲ್ಲ ಅಂಗಡಿಗಳ ಮಾಲೀಕರು ಮಾದರಿ ನೀತಿ ಸಂಹಿತೆಯ ನಿಬಂಧನೆಗೊಳಪಟ್ಟು ವ್ಯಾಪಾರ ವಹಿವಾಟು ನಡೆಸಬೇಕು ಎಂದು ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿ ಹೇಳಿದರು.

ಪಟ್ಟಣದ ಕಂದಾಯ ಭವನದ ಚುನಾವಣಾ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ಷೇತ್ರದ ವಿವಿಧ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿದರು.

ಆಭರಣ, ಮುದ್ರಣ, ಬಾರ್, ಕಿರಾಣಿ ಅಂಗಡಿ, ಚಿತ್ರಮಂದಿರ, ಪೆಟ್ರೋಲ್ ಬಂಕ್, ಶಾಮಿಯಾನ ಡೆಕೋರೇಟರ್ ಹಾಗೂ ಹೊಟೇಲ್ ಮಾಲೀಕರು ನಿಯಮ ಪಾಲಿಸಿ ವಹಿವಾಟು ನಡೆಸಬೇಕು. ನೀತಿ ಸಂಹಿತೆ ಉಲ್ಲಂಘಿಸಿದರೆ ಚುನಾವಣೆ ಆಯೋಗದ ನಿರ್ದೇಶನದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುದ್ರಣ ಮಾಲೀಕರು ಮುದ್ರಣಾಲಯದ ಹೆಸರು ಮುದ್ರಿಸಿದ ಒಟ್ಟು ಪ್ರತಿಗಳ ಸಂಖ್ಯೆ, ವಹಿವಾಟಿನ ಮಾಹಿತಿ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು. ಒಂದು ವೇಳೆ ಉಲ್ಲಂಘನೆಯಾಗಿರುವ ಮಾಹಿತಿ ಕಂಡುಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರ್ ವಿಠ್ಠಲ್ ಚೌಗಲೆ, ತಾಪಂ ಇಒ ಸಂತೋಷ್ ಪಾಟೀಲ್, ವಿಜಯಕುಮಾರ ಗುಂಡೂರು, ಅಂಗಡಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಭೂತೆ, ಅಂಗಡಿ ಮಾಲೀಕ ಬಸವರಾಜ ಗುಳಗುಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net