ಶಿರಡಿ ಸಾಯಿ ಮಂದಿರದ 3ನೇ ವಾರ್ಷಿಕೋತ್ಸವ ಸಂಪನ್ನ

050320 Yalaburga Saibaba Temple 3rd Anniversary
Published on

ಯಲಬುರ್ಗಾ: ಪಟ್ಟಣದ ಕುಕನೂರು ರಸ್ತೆಯಲ್ಲಿರುವ ಶಿರಡಿ ಶ್ರೀ ಸಾಯಿ ಬಾಬಾ ಮಂದಿರದ 3ನೇ ವಾರ್ಷಿಕೋತ್ಸವ ನಿಮಿತ್ತ ಶ್ರೀ ಸಾಯಿ ಬಾಬಾರಿಗೆ ಗುರುವಾರ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.

ಸಾಯಿ ಮಂದಿರದ ಸಂಸ್ಥಾಪಕ ಹಾಗೂ ಜಿಲ್ಲಾ ನಿವೃತ್ತ ನ್ಯಾಯಾಧೀಶ ಮಹಿಪಾಲ ದೇಸಾಯಿ ಮಾತನಾಡಿ, ಮಾನವರು ಮಹಾತ್ಮರಾದವರನ್ನು ಪೂಜಿಸಿ ಆರೈಸುವುದರಿಂದ ಜೀವನದಲ್ಲಿ ನೆಮ್ಮದಿ ಕಾಣುತ್ತೇವೆ. ಶಿರಡಿ ಸಾಯಿ ಬಾಬಾರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಆಲಿಸಿದಾಗ, ಜೀವನದಲ್ಲಿ ಭಕ್ತಿ ಮಾರ್ಗ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಮಹಾತ್ಮರ ಸಂದೇಶಗಳು ಸಮಾಜ ಒಳಿತಿಗಾಗಿ ಇವೆ ಎಂಬುದನ್ನು ಮನಗಾಣಬೇಕು ಎಂದರು.

ಪ್ರಮುಖರಾದ ಶ್ರೀಪಾದಪ್ಪ ಅಧಿಕಾರಿ, ಬಿ.ಎಂ.ಶಿರೂರ, ಬಸಲಿಂಗಪ್ಪ ಭೂತೆ, ಶೇಖರಗೌಡ ಉಳ್ಳಾಗಡ್ಡಿ, ಅಮರಪ್ಪ ಕಲಬುರ್ಗಿ, ರಾಜಶೇಖರ ನಿಂಗೋಜಿ, ಜಿ.ಎಂ.ನಿಂಗೋಜಿ, ಮುನಿಯಪ್ಪ ಹುಬ್ಬಳ್ಳಿ, ಅರವಿಂದಗೌಡ ಪಾಟೀಲ್, ಡಾ.ಕೆ.ಬಿ.ಬ್ಯಾಳಿ, ವೀರಣ್ಣ ಹುಬ್ಬಳ್ಳಿ, ಕೆ.ಜಿ.ಪಲ್ಲೇದ, ವಿಜಯಲಕ್ಷ್ಮೀ ಬೆಲೇರಿ, ಜ್ಯೋಜಿ ಪಲ್ಲೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net