ಮನುಕುಲಕ್ಕೆ ಒಳಿತಾಗಿವೆ ಶರಣರ ಆದರ್ಶಗಳು

MADAYA
ಯಲಬುರ್ಗಾ ತಾಲೂಕಿನ ಗುಳೆದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಬಸವಾನುಭವ ಹಾಗೂ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮವನ್ನು ನಿವೃತ್ತ ಪಿಎಸ್‌ಐ ಬಸನಗೌಡ ಪಾಟೀಲ್ ಉದ್ಘಾಟಿಸಿದರು. ಗಣ್ಯರಾದ ರೇಣುಕಪ್ಪ ಮಂತ್ರಿ, ಹನುಮಗೌಡ ಬಳ್ಳಾರಿ, ಬಸವರಾಜ ಹೂಗಾರ ಇತರರಿದ್ದರು.
Published on

ಯಲಬುರ್ಗಾ: ಯುವಜನತೆ ಸಂಸ್ಕೃತಿ, ಸಂಸ್ಕಾರ ಅಳವಡಿಸಿಕೊಳ್ಳದೇ ದುಶ್ಚಟಗಳಿಗೆ ಬಲಿಯಾಗಿ ಸುಂದರ ಬದುಕು ಹಾಳು ಮಾಡಿಕೊಳ್ಳುತ್ತಿದೆ ಎಂದು ನಿವೃತ್ತ ಪಿಎಸ್‌ಐ ಬಸನಗೌಡ ಪಾಟೀಲ್ ಹೇಳಿದರು.

ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕನಾಗಲಾಂಬಿಕೆ ಮಹಿಳಾಗಣದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ 97ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಹಾಗೂ ಕಾಯಕಯೋಗಿ ಹೂಗಾರ ಮಾದಯ್ಯ ಜಯಂತಿಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬದುಕು ಬವಣೆಯಿಂದ ದೂರವಾಗಲು ಶರಣರ, ಸಂತರ ತತ್ವಾದರ್ಶಗಳು ಔಷಧಗಳಾಗಿವೆ. ಇದರ ಸಾಕಾರತೆ ಪಡೆಯಲು ಶರಣರ ಸಂಘದ ಒಡನಾಟ ಅತ್ಯವಶ್ಯ. 12ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರಾದ ಹೂಗಾರ ಮಾದಯ್ಯನವರು ಬಸವಣ್ಣನವರ ಕಾಯಕ ಪರಿಕಲ್ಪನೆಯಂತೆ, ಕಲ್ಯಾಣ ಶರಣರ ಇಷ್ಟಲಿಂಗ ಪೂಜೆಗೆ ಹೂ ಪತ್ರೆ ನೀಡಿದವರು. ತಾವು ಕೂಡ ಅಂಗದ ಮೇಲೆ ಇಷ್ಟಲಿಂಗ ಧರಿಸಿ, ಲಿಂಗಾಂಗ ಸಮರಸದಿಂದ ಶರಣರಾದರು ಎಂದರು.

ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ನಿಷ್ಕಲ್ಮಶವಾಗಿ ನಿಷ್ಠೆೆಯ ಕಾಯಕ ಮಾಡುತ್ತಾ, ಅನುಭವ ಮಂಟಪದಲ್ಲಿ ವಚನ ರಚಿಸುವ ಚಿಂತನೆಯಲ್ಲಿ ಹೂಗಾರ ಮಾದಯ್ಯ ತೊಡಗಿಕೊಂಡಿದ್ದರು. ಅಂಥ ಮಹಾತ್ಮರ ಕುರಿತು ತಿಳಿದು ಬಾಳಿದರೆ ಜೀವನ ಪಾವನವಾಗುತ್ತದೆ ಎಂದರು. ವನಜಭಾವಿ ಬಸವ ದಳದ ಗೌರವ ಅಧಕ್ಷ ದೇವಪ್ಪ ಕೋಳೂರು ಮಾತನಾಡಿದರು.

ಗುಳೆ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಶಿವಾನಂದಪ್ಪ ಬೇವೂರು, ಗಿರಿಮಲ್ಲಪ್ಪ ಪರಂಗಿ, ವಿರುಪಣ್ಣ ಮೇಟಿ, ಹನುಮಂತಪ್ಪ ಮೇಟಿ, ಹನುಮಗೌಡ ಬಳ್ಳಾರಿ, ಮಲ್ಲೇಶಪ್ಪ ಟೈಲರ್, ಚಿದಾನಂದಗೌಡ ಗೊಂದಿ, ವೀರನಗೌಡ ಪಾಟೀಲ್, ಪಂಪಾಪತಿ ಹೊಸಳ್ಳಿ, ಲಿಂಗನಗೌಡ ದಳಪತಿ, ಶಿವಪುತ್ರಪ್ಪ ಉಚ್ಚಲಕುಂಟಿ, ಜಗದೀಶಪ್ಪ ಮೇಟಿ, ಶಾಂತಕುಮಾರ ಹೊಸಳ್ಳಿ, ಯಮನಮ್ಮ ಗೌಡ್ರ, ಶರಣಮ್ಮ ಚಿದಾನಂದಪ್ಪ ಹೊಸಳ್ಳಿ, ನಾಗಮ್ಮ ಜಾಲಿಹಾಳ, ಶಂಕ್ರಮ್ಮ ಹೊಸಳ್ಳಿ, ಬಸಮ್ಮ ಹೂಗಾರ, ಸಾವಿತ್ರಮ್ಮ ಆವಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net