ಸ್ವಂತ ಹಣದಿಂದ ಕಿರು ಸೇತುವೆ ನಿರ್ಮಾಣ

SETUVE
ಯಲಬುರ್ಗಾ ಹೊರ ವಲಯದಲ್ಲಿ ರೈತರ ಜಮೀನಿಗೆ ಹೋಗಲು ಅನುಕೂಲವಾಗುವಂತೆ ನಿವೃತ್ತ ಡಿಡಿಪಿಐ ಶಂಕ್ರಪ್ಪ ಗಾಂಜಿ ಜೆಸಿಬಿ ಸಹಾಯದಿಂದ ಕಿರುಸೇತುವೆ ನಿರ್ಮಿಸುತ್ತಿರುವುದು.
Published on

ಯಲಬುರ್ಗಾ: ನಿತ್ಯ ತಮ್ಮ ಹೊಲಕ್ಕೆ ಹೋಗಲು ಸಮರ್ಪಕ ದಾರಿ ಇಲ್ಲದೆ ಪರಿತಪಿಸುತ್ತಿದ್ದ ರೈತರ ಅನುಕೂಲಕ್ಕಾಗಿ ರಸ್ತೆಗೆ ಸ್ವಂತ ಹಣದಲ್ಲಿ ಕಿರುಸೇತುವೆ ನಿರ್ಮಿಸುವ ಮೂಲಕ ನಿವೃತ್ತ ಡಿಡಿಪಿಐ ಶಂಕ್ರಪ್ಪ ಗಾಂಜಿ ಇತರರಿಗೆ ಮಾದರಿಯಾಗಿದ್ದಾರೆ.

ಪಟ್ಟಣ ಹೊರವಲಯದ ಶಿರಡಿ ಶ್ರೀ ಸಾಯಿಬಾಬಾ ದೇವಾಲಯ ಪಕ್ಕದಲ್ಲಿ ಹಾದು ಹೋಗುವ ರೈತರು, ತಮ್ಮ ಹೊಲಗಳಿಗೆ ಹೋಗಲು ಸರಿಯಾದ ದಾರಿ ಇಲ್ಲದೆ ಕಷ್ಟಪಡುತ್ತಿದ್ದರು. ರಸ್ತೆಯಲ್ಲಿ ಹರಿಯುವ ಹಳ್ಳ ದಾಟಿಕೊಂಡು ಹೋಗಬೇಕಿತ್ತು. ಇದನ್ನು ಅರಿತು ನಿವೃತ್ತ ಡಿಡಿಪಿಐ ಗಾಂಜಿ, ಸ್ವಂತ ಹಣದಿಂದ ಅಲ್ಲಿ ಬೆಳೆದಿರುವ ಮುಳ್ಳುಕಂಟಿ ತೆರವುಗೊಳಿಸಿ, ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸಿದ್ದಾರೆ.

ಇದರಿಂದ ಎತ್ತಿನ ಚಕ್ಕಡಿ ಓಡಾಡಲು ಅನುಕೂಲವಾಗಿದೆ. ಇದೇ ಮಾರ್ಗದಲ್ಲಿ ಗಾಂಜಿಯವರ ಜಮೀನೂ ಇದೆ. ರೈತರು ಗಾಂಜಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ನಿವಾಸಿ ಶಂಕ್ರಪ್ಪ ಗಾಂಜಿ ತಾಲೂಕಿನ ಶಿಕ್ಷಕ, ಬಿಆರ್‌ಸಿ ಹಾಗೂ ರಾಜ್ಯದ ಹಲವೆಡೆ ಬಿಇಒ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಳಗಾವಿಯಲ್ಲಿ ಡಿಡಿಪಿಐ ಆಗಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net