ಜವಾಬ್ದಾರಿ ಅರಿತು ಶಿಕ್ಷಣ ಕೊಡಿ -ಶಿಕ್ಷಕರಿಗೆ ಬಿಇಒ ಮೌನೇಶ ಸಲಹೆ

Yalaburga English training Workshop
ಯಲಬುರ್ಗಾ ತಾಲೂಕಿನ ಹೊಸಳ್ಳಿಯ ಕೆಆರ್‌ಸಿ ವಸತಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಂಗ್ಲಿಷ್ ತರಬೇತಿ ಕಾರ್ಯಾಗಾರಕ್ಕೆ ಬಿಇಒ ಬಿ.ಮೌನೇಶ ಚಾಲನೆ ನೀಡಿದರು.
Published on

ಯಲಬುರ್ಗಾ: ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕೆಂದು ಎಂದು ಬಿಇಒ ಬಿ.ಮೌನೇಶ ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಇಂಗ್ಲಿಷ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಕರು ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಿದಷ್ಟು ಜ್ಞಾನ ವಿಸ್ತಾರಗೊಳ್ಳಲಿದೆ. ಶಿಕ್ಷಕರು ಭಾಷಾ ಪ್ರಾವೀಣ್ಯತೆ, ಬೋಧನಾ ಕೌಶಲದ ಮೂಲಕ ಮಕ್ಕಳಲ್ಲಿ ಇಂಗ್ಲಿಷ್ ಕಲಿಕೆ ಬಗ್ಗೆ ವಿಶ್ವಾಸ ಮೂಡಿಸಬೇಕೆಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net