ಕುರಿಗಾಹಿ ಮಹಿಳೆ ಅತ್ಯಾಚಾರ, ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಿ: ಯಲಬುರ್ಗಾದಲ್ಲಿ ತಹಸೀಲ್ದಾರ್‌ಗೆ ಹಾಲುಮತ ಮಹಾಸಭಾದ ತಾಲೂಕು ಘಟಕ ಮನವಿ

07032022 Yelburga protest
Published on

ಯಲಬುರ್ಗಾ: ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಾಲುಮತ ಮಹಾಸಭಾದ ತಾಲೂಕು ಘಟಕ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಸೋಮವಾರ ಪಟ್ಟಣದ ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ಮನವಿ ಸಲ್ಲಿಸಿದರು.

ಮಹಾಸಭಾದ ತಾಲೂಕು ಅಧ್ಯಕ್ಷ ಕೆ.ಆರ್.ಬೆಟಗೇರಿ ಮಾತನಾಡಿ, ಧಾರವಾಡ ಜಿಲ್ಲೆ ಯರಗುಪ್ಪಿಯ ಕುರಿಹಟ್ಟಿಯಿಂದ ಕಟ್ಟಿಗೆ ತರಲು ಹೋದಾಗ ಮಹಿಳೆ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸೆಗಿ ಕೊಲೆ ಮಾಡಿದ್ದಾರೆ. ಅತ್ಯಾಚಾರ ನಡೆಸಿದ ದುಷ್ಕರ್ಮಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ರಾಜ್ಯಾದ್ಯಂತ ಪದೇಪದೆ ಕುರಿಗಾಹಿಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಭಯದ ವಾತವರಣದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವ ರಕ್ಷಣೆಗೆ ಕುರಿಗಾಹಿಗಳಿಗೆ ಸರ್ಕಾರ ಬಂದೂಕು ಪರವಾನಗಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಬಾಲಚಂದ್ರ ಸಾಲಬಾವಿ, ಸ.ಶರಣಪ್ಪ ಪಾಟೀಲ್ ಮಾತನಾಡಿ, ವಲಸೆ ಕುರಿಗಾಹಿಗಳಿಗೆ ರಕ್ಷಣೆ ನೀಡಬೇಕು. ಶೀಘ್ರ ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು. ಕುರಿಗಾಹಿಗಳಿಗೆ ಸರ್ಕಾರ ಸಕಾಲಕ್ಕೆ ನೆರವಿಗೆ ಧಾವಿಸಬೇಕು ಎಂದರು.

ಪ್ರಮುಖರಾದ ಕೆ.ಎಸ್.ಕೊಡತಗೇರಿ, ಮಾನಪ್ಪ ಪೂಜಾರ, ಶರಣು ಕಳಸಪ್ಪನವರ, ಎಸ್.ಕೆ.ದಾನಕೈ, ಶರಣಪ್ಪ ನಿಂಗೋಜಿ, ವೀರಣ್ಣ ಹುಬ್ಬಳ್ಳಿ, ಕಲ್ಲಿನಾಥ ಲಿಂಗಣ್ಣನವರ, ಮುತ್ತಣ್ಣ ಪುರ್ತಗೇರಿ, ಭೀಮಪ್ಪ ಜರಕುಂಟಿ, ವೀರೇಶ ಕಲ್ಲೂರು, ಲಕ್ಷ್ಮಣ ಜಡ್ರಾಮಕುಂಟಿ, ಹನುಮಂತಪ್ಪ ಸಂಗನಾಳ, ಸಿದ್ದಪ್ಪ ಕಲ್ಲಗೋಡಿ, ಬಸಪ್ಪ ನಿಡಗುಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net