ಸಜ್ಜೆ, ಮೆಕ್ಕೆಜೋಳ ಬೆಳೆಗೆ ವರವಾದ ವರುಣ

Untitled design(17)
ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದ ಪ್ರಾಥಮಿಕ ಶಾಲಾ ಆವರಣ ಜಲಾವೃತಗೊಂಡಿರುವುದು.
Published on

ಯಲಬುರ್ಗಾ: ಪಟ್ಟಣ ಸೇರಿ ತಾಲೂಕಿನ ನಾನಾ ಕಡೆ ಬುಧವಾರ ತಡರಾತ್ರಿ ಉತ್ತಮ ಸುರಿದಿದೆ.

ಮಳೆಯಿಂದಾಗಿ ಕೆಲ ಕಡೆ ಜನಜೀವನ ಅಸ್ತವ್ಯಸ್ತವಾಗಿತ್ತು. ಜಮೀನುಗಳ ಬದು, ನಾಲೆಗೆ ನೀರು ಹರಿದಿವೆ. ಸಜ್ಜೆ, ಮೆಕ್ಕೆಜೋಳ ಬೆಳೆಗೆ ಮಳೆ ವರದಾನವಾಗಿದೆ. ಹಿರೇವಂಕಲಕುಂಟಾ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಮನೆ, ಬೆಳೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಬೆಳಗಿನವರೆಗೂ ವಿದ್ಯುತ್ ಕಡಿತವಾಗಿತ್ತು. ಗುರುವಾರ ಸ್ವಾತಂತ್ರ್ಯ ದಿನಾಚರಣೆ ವೇಳೆ ಶಾಲಾ, ಕಾಲೇಜು ಆವರಣ ಜಲಾವೃತಗೊಂಡು ವಿದ್ಯಾರ್ಥಿಗಳು ತೊಂದರೆ ಅನುಭವಿಸುಂತಾಯಿತು. ತಾಳಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಮಳೆ ನೀರು ನುಗ್ಗಿದ ಪರಿಣಾಮ ಕಡತಗಳು, ಪಡಿತರ ಅಕ್ಕಿ ನೀರು ಪಾಲಾಗಿವೆ. ಕಾಂಪೌಂಡ್ ಗೋಡೆ ಬಿದ್ದಿದೆ.

ಮಳೆ ವರದಿ: ಯಲಬುರ್ಗಾ 11ಎಂಎಂ, ಹಿರೇವಂಕಲಕುಂಟಾ 116.8ಎಂಎಂ, ಯಡ್ಡೋಣಿ 104ಎಂಎಂ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net