10 ಸಾವಿರ ರೂ. ಸಾಲ ಮನ್ನಾ ಮಾಡಿ; ಬೀದಿ ಬದಿ ವ್ಯಾಪಾರಿಗಳಿಂದ ಪತ್ರ ಚಳವಳಿ

29052021 Yelburga letter protest
Published on

ಯಲಬುರ್ಗಾ: ಪ್ರಧಾನಮಂತ್ರಿ ಸ್ವನಿಧಿ ಮತ್ತು ಆತ್ಮ ನಿರ್ಭರ ಯೋಜನೆಯಡಿ ಪಡೆದಿರುವ 10 ಸಾವಿರ ರೂ. ಸಾಲ ಮನ್ನಾ ಮಾಡುವಂತೆ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಪತ್ರ ಚಳವಳಿ ಮೂಲಕ ಪ್ರಧಾನ ಮಂತ್ರಿಯನ್ನು ಒತ್ತಾಯಿಸಲಾಯಿತು.

ಒಕ್ಕೂಟದ ತಾಲೂಕು ಅಧ್ಯಕ್ಷ ಮಹಮ್ಮದ್ ಗೌಸ್ ಮಕಾಂದರ್ ಮಾತನಾಡಿ, ಲಾಕ್‌ಡೌನ್ ಕಾರಣಕ್ಕೆ ಬೀದಿ ಬದಿ ವ್ಯಾಪಾರಿಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ಆತ್ಮನಿರ್ಭರ ಯೋಜನೆಯಡಿ ನೋಂದಾಯಿತರಿಗೆ ತಲಾ ಎರಡು ಸಾವಿರ ರೂ. ಪರಿಹಾರವೆಂದು ಘೋಷಿಸಿದೆ. ಪಟ್ಟಣದಲ್ಲಿ 241 ಬೀದಿ ಬದಿ ವ್ಯಾಪಾರಸ್ಥರಿದ್ದು, 148 ಜನರು ಆತ್ಮ ನಿರ್ಭರ ಯೋಜನೆಯಡಿ ನೋಂದಣಿ ಮಾಡಿಸಿದ್ದಾರೆ. ಇದರಿಂದಾಗಿ ಬಾಕಿ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದ ಪರಿಹಾರ ಸಿಗುವುದಿಲ್ಲ ಎಂದರು.

ಪದಾಧಿಕಾರಿಗಳಾದ ಬಸವರಾಜ, ಶರಣಪ್ಪ ಖಾನಾವಳಿ, ದೇವೇಂದ್ರಪ್ಪ ಭಜಂತ್ರಿ, ಅಶೋಕ ಜೋಗ್ಯಾರ, ಹಸನ್‌ಸಾಬ್, ಇಮಾಮ್ ಹುಸೇನ್ ಕೊವಾಲ್, ಮಹಾದೇವಪ್ಪ ಹೂಗಾರ್, ಅಂಬರೀಶ ಕಲಬುರ್ಗಿ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net