ಹಬ್ಬಗಳ ಆಚರಣೆ ಸೌಹಾರ್ದವಾಗಿರಲಿ

cpi mounesh
ಮೌನೇಶ್ವರ ಮಾಲಿಪಾಟೀಲ್
Published on

ಯಲಬುರ್ಗಾ: ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥಿತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಹೇಳಿದರು.

ಪಟ್ಟಣದ ಪೋಲಿಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ಶನಿವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿಯಿಂದ ಹೊಂದಿರಬೇಕು.

ಪಟ್ಟಣ ಶಾಂತಿಗೆ ಹೆಸರಾಗಿದ್ದು, ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ಆದ್ದರಿಂದ ಮುಂಬರುವ ಹಬ್ಬಗಳನ್ನು ಎಲ್ಲರೂ ಸೌಹಾರ್ದದಿಂದ ಆಚರಿಸಬೇಕು ಎಂದು ಕರೆ ನೀಡಿದರು.

ಪಿಎಸ್‌ಐ ವಿಜಯ್ ಪ್ರತಾಪ್ ಮಾತನಾಡಿ, ಶಾಂತಿ ಕದಡುವ ಕೆಲಸ ಮಾಡಬೇಡಿ. ಸಾಮಾಜಿಕ ಮಧ್ಯಮಗಳ ಮೇಲೆ ಸಂಪೂರ್ಣ ನಿಗಾ ಇಟ್ಟಿದ್ದು, ಕೋಮು ಭಾವನೆ ಹರಡುವ ಸಂದೇಶಗಳನ್ನು ಹರಡಬಾರದು.

ಅಂಥ ಘಟನೆಗಳು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗಣೇಶ ಚತುರ್ಥಿ ಕಮೀಟಿ ಸದಸ್ಯರು ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ, ಪರವಾನಗಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದರು.

ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖ್ಯಾಧಿಕಾರಿ ನಾಗೇಶ, ಆರ್‌ಐ ಹಸನಸಾಬ್, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಅಕ್ತರಸಾಬ ಖಾಜಿ, ಅಮರೇಶ ಹುಬ್ಬಳ್ಳಿ, ಸುರೇಶಗೌಡ ಶಿವನಗೌಡ, ದಾನನಗೌಡ ತೊಂಡಿಹಾಳ, ಛತ್ರಪ್ಪ ಛಲವಾದಿ, ಶಿವಾನಂದ ಬಣಕಾರ, ಬಸವರಾಜ ಗುಳಗುಳಿ, ಶಿವಮೂರ್ತಿ ಇಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net