ಸರ್ಕಾರದ ಯೋಜನೆಗಳ ತಿಳಿಸಿ: ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಸಲಹೆ

060123 Hireharalihalli Booth Vijay
ಹಿರೇಅರಳಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಿದರು.
Published on

ಯಲಬುರ್ಗಾ: ಪ್ರತಿಯೊಬ್ಬ ಕಾರ್ಯಕರ್ತ ಬೂತ್ ಮಟ್ಟದಲ್ಲಿ ಪಕ್ಷ ಬಲಬಡಿಸಲು ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿದರು.

ಹಿರೇಅರಳಿಹಳ್ಳಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನದಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಜನಪರ ಆಡಳಿತವನ್ನು ವಿಶ್ವವೇ ಮೆಚ್ಚಿದೆ. ಹೀಗಾಗಿ ಮತ್ತೊಮ್ಮೆ ಅವರ ಕೈಬಲಪಡಿಸಲು ಕಾರ್ಯಕರ್ತರು, ಮುಖಂಡರು ಮುಂದಾಗಬೇಕು ಎಂದರು. ಇದೇ ವೇಳೆ 10ಕ್ಕೂ ಹೆಚ್ಚು ಜನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ, ಪ್ರಧಾನ ಕಾರ್ಯದರ್ಶಿಗಳಾದ ನವೀನ ಗುಳಗಣ್ಣವರ್, ನರಸಿಂಗರಾವ್ ಕುಲಕರ್ಣಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಪ್ಪ ವಾದಿ, ಬೂತ್ ಸಮಿತಿ ಅಧ್ಯಕ್ಷರಾದ ದ್ಯಾಮಣ್ಣ ಕೋಳೂರು, ಶ್ರೀಧರ ಹಿರೇಮಠ, ಮುಖಂಡರಾದ ಶೇಖರಗೌಡ ರಾಮತ್ನಾಳ, ರಂಗಪ್ಪ ತಳವಾರ್, ಬಾಲರಾಜ ಕೋರಿ, ಅಮರಪ್ಪ ಕುರುಬರ, ಹನುಮಪ್ಪ ಭಜಂತ್ರಿ, ಶರಣಪ್ಪ ವಾದಿ, ಪರಸಪ್ಪ ಕೊಂಡಗುರಿ, ದೊಡ್ಡಪ್ಪ ಹೂಗಾರ, ಶರಣ್ಣಪ್ಪ ತಗ್ಗಿಹಾಳ, ರಾಜಶೇಖರಯ್ಯ ಹಿರೇಮಠ, ಮಹಾಂತೇಶ ವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net