ಸರಕು ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸಿ; ಪಪಂ ಮುಖ್ಯಾಧಿಕಾರಿಗೆ ಚಾಲಕರ ಯೂನಿಯನ್ ಮನವಿ

14072021 Yelburga Drivers Union Request
Published on

ಯಲಬುರ್ಗಾ: ಸರಕು ಸಾಗಣೆ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳ ನಿಗದಿಪಡಿಸುವಂತೆ ಒತ್ತಾಯಿಸಿ ನಮ್ಮ ಚಾಲಕರ ಟ್ರೇಡ್ ಯೂನಿಯನ್‌ನಿಂದ ಪಪಂ ನೌಕರ ಎಚ್.ರಾಮಣ್ಣ ಮೂಲಕ ಮುಖ್ಯಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಪಟ್ಟಣದಲ್ಲಿ 40ಕ್ಕೂ ಅಧಿಕ ಸರಕು ಸಾಗಣೆ ವಾಹನಗಳಿದ್ದು, ಎಲ್ಲೆಂದರಲ್ಲಿ ನಿಲ್ಲಿಸಬೇಕಾಗಿದೆ. ಇದರಿಂದಾಗಿ ಪಟ್ಟಣದಲ್ಲಿ ವಾಹನಗಳ ನಿಲುಗಡೆಗೆ ಸ್ಥಳ ಕಲ್ಪಿಸಬೇಕು ಎಂದು ಚಾಲಕರ ಟ್ರೇಡ್ ಯೂನಿಯನ್ ತಾಲೂಕು ಅಧ್ಯಕ್ಷ ಮೌಲಾ ಹುಸೇನ್ ಮುಸ್ಲಾಪುರ ಆಗ್ರಹಿಸಿದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಭಾವಿಮನಿ, ಸಂಘದ ಪದಾಧಿಕಾರಿಗಳಾದ ಮಹಾಂತೇಶ ಛಲವಾದಿ, ವೀರೇಶ ಸವಣೂರು, ಬಿ.ಶಿವಕುಮಾರ್, ಹನುಮಂತ ಉಪ್ಪಾರ, ಶಿವರಾಜ ಕುರಿ, ಸಿದ್ದಪ್ಪ, ಶೇಖಪ್ಪ, ಮಹೇಶ, ದೇವೇಂದ್ರ ಪಾಟೀಲ್ ಮಲ್ಲಣ್ಣ ಶಿರೂರು ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net