ಯಲಬುರ್ಗಾದಲ್ಲಿ ನಿಡೋಣಿ ವಿರಕ್ತಮಠದ ಸಿದ್ಧಲಿಂಗೇಶ್ವರ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

07022022 Yelburga Addapallakki
Published on

ಯಲಬುರ್ಗಾ: ಪಟ್ಟಣದ ಶ್ರೀಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಶ್ರೀಗಳ ಜನ್ಮಸುವರ್ಣ ಮಹೋತ್ಸವ ಹಾಗೂ 20ನೇ ವಾರ್ಷಿಕ ಪೀಠಾರೋಹಣ ನಿಮಿತ್ತ ಸೋಮವಾರ ನಿಡೋಣಿ ವಿರಕ್ತಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು.

ಶ್ರೀಧರಮುರಡಿ ಮಠದಿಂದ ಅಡ್ಡಪಲ್ಲಕ್ಕಿ ಉತ್ಸವ ಆರಂಭವಾಗಿ ಟಿಪ್ಪು ಸುಲ್ತಾನ ವೃತ್ತ, ಕನಕದಾಸ, ಕನ್ನಡ ಕ್ರಿಯಾ ಸಮಿತಿ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಹಾಗೂ ಸಂಸ್ಥಾನ ಹಿರೇಮಠ ಮಾರ್ಗವಾಗಿ ಶ್ರೀಮಠ ತಲುಪಿತು. ಮಹಿಳೆಯರ ಕುಂಭಮೇಳ, ಡೊಳ್ಳು, ನಂದಿಕೋಲು ಸೇರಿದಂತೆ ವಿವಿಧ ವಾದ್ಯವೃಂದಗಳು ಗಮನ ಸೆಳೆದವು. ಬೆಳಗ್ಗೆ ಬಸವಲಿಂಗೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶಿವದೀಕ್ಷೆ ಸಮಾರಂಭ ನಡೆಯಿತು. ಶ್ರೀಮಠದಿಂದ ಎರಡು ಜೋಡಿ ಉಚಿತ ಸಾಮೂಹಿಕ ವಿವಾಹ ನಡೆಯಿತು. ಬಸವಲಿಂಗೇಶ್ವರ ಸ್ವಾಮೀಜಿ, ಕರಿಸಿದ್ಧೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net