

ಯಲಬುರ್ಗಾ: ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.
ಇಲ್ಲಿನ ತಾಪಂ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಜಾತಿಯಿಂದ ಮನುಷ್ಯ ಗುರುತಿಸಿಕೊಳ್ಳಬಾರದು. ಉತ್ತಮ ವ್ಯಕ್ತಿತ್ವದಿಂದ ಗೌರವ ಸಂಪಾದನೆ ಮಾಡಬೇಕು ಎನ್ನುವುದು ಕುವೆಂಪು ಅವರ ಪರಿಕಲ್ಪನೆಯಾಗಿತ್ತು. ಹಾಗಾಗಿ ಜಾತ್ಯಾತೀತ ಮನೋಭಾವನೆಯಿಂದ ಮೂಡಿಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವ ಅವರ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.