ಮುತ್ತಾಳ-ಕದ್ರಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ: 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

030622 Muttala Kadralli Link Road Work
ಕುಕನೂರು ತಾಲೂಕಿನ ಮುತ್ತಾಳ-ಕದ್ರಳ್ಳಿ ಸಂಪರ್ಕ ರಸ್ತೆ ಕಾಮಗಾರಿ ಆರಂಭವಾಯಿತು.
Published on

ಯಲಬುರ್ಗಾ: ಕುಕನೂರು ತಾಲೂಕಿನ ಮುತ್ತಾಳದಿಂದ ಕದ್ರಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಬುಧವಾರ ಆರಂಭಿಸಲಾಯಿತು. ಹಿರೇಬೀಡನಾಳ ಗ್ರಾಪಂ ಅಧ್ಯಕ್ಷ ಗವಿಸಿದ್ದನಗೌಡ ಮಾಲಿಪಾಟೀಲ್ ಮಾತನಾಡಿ, ಸಚಿವ ಹಾಲಪ್ಪ ಆಚಾರ್ 2 ಕೋಟಿ ವೆಚ್ಚದ ಮುತ್ತಾಳ-ಕದ್ರಳ್ಳಿ ರಸ್ತೆ ಸುಧಾರಣೆಗೆ ಭೂಮಿಪೂಜೆ ನೆವೇರಿಸಿದ್ದರು. ಎರಡೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಕದ್ರಳ್ಳಿ ಸಮೀಪವಿರುವ ಮಂಗಳೂರು-ಕಿನ್ನಾಳ ಹಳ್ಳಕ್ಕೆ ಬ್ರಿಡ್ಜ್ ಕಂ.ಬ್ಯಾರೇಜ್ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು. ಪ್ರಮುಖರಾದ ಶೇಖರಡ್ಡಿ ಮಾದಿನೂರ, ಈರಪ್ಪ ತಳವಾರ್, ಯಮನೂರಪ್ಪ ಕುರಿ, ಶರಣಪ್ಪ ಕುರಿ, ಕೊಟ್ರಪ್ಪ, ಚಿದಾನಂದಪ್ಪ ತೋಟದ, ಹನುಮರಡ್ಡಿ ಮಾಳಗೌಡ್ರ, ಬಸವರಾಜ ಅರಿಕೇರಿ, ಆನಂದ ರ್ಯಾವಣಕಿ, ಗುತ್ತಿಗೆದಾರ ಗದ್ದೆಯ್ಯ ಕುಡಗುಂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net