ಮುರಡಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಶರಣವ್ವ ಗೊಂದಿ ಅವಿರೋಧ ಆಯ್ಕೆ

150922 Muradi GP President Selection
Published on

ಯಲಬುರ್ಗಾ: ಮುರಡಿ ಗ್ರಾಮದ ಗ್ರಾಪಂ ಅಧ್ಯಕ್ಷರಾಗಿ ಶರಣವ್ವ ಹನುಮಂತಪ್ಪ ಗೊಂದಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಅವಿಶ್ವಾಸದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತರಲಕಟ್ಟಿ ಗ್ರಾಮದ ಶರಣವ್ವ ಗೊಂದಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಶ್ರೀಶೈಲ ತಳವಾರ ಘೋಷಿಸಿದರು. ಒಟ್ಟು 20 ಸದಸ್ಯರ ಪೈಕಿ 18 ಜನ ಚುನಾವಣೆಗೆ ಹಾಜರಾಗಿದ್ದರು. ಇಬ್ಬರು ಗೈರಾಗಿದ್ದರು. ಚುನಾವಣಾ ನೌಕರ ಸಮೀರ, ಪಿಡಿಒ ಅಬ್ದುಲ್ ಗಫಾರ ಇದ್ದರು. ಸದಸ್ಯರು ವಿಜಯೋತ್ಸವ ಆಚರಿಸಿದರು.ಗ್ರಾಪಂ ಉಪಾಧ್ಯಕ್ಷೆ ಭೀಮವ್ವ ರಾಠೋಡ, ಸದಸ್ಯರಾದ ಸುನೀತಾ ವಿರೂಪಾಕ್ಷಗೌಡ, ಶಿವವ್ವ ಮಾರನಾಳ, ಪ್ರಕಾಶ ಮಾಲಿಪಾಟೀಲ್, ಯಮನಪ್ಪ ಮಾಳಿ, ಬಸವರಾಜ ಹಾಲಳ್ಳಿ, ಹನುಮಪ್ಪ ತಳವಾರ, ಬಸನಗೌಡ ಮಾಲಿಪಾಟೀಲ್, ಯಲ್ಲವ್ವ ಲಮಾಣಿ, ಹನಮಗೌಡ ಮಾಲಿಪಾಟೀಲ್, ಹನಮೇಶ ವಡ್ಡರ, ಶಾರದಮ್ಮ ಮೇಟಿ, ನೀಲವ್ವ ಶೀಲಿ, ಬಸಪ್ಪ ಕೋಳೂರು, ಸೋಮಲಿಂಗಪ್ಪ ಕುರಿ, ಹುಲಿಗೆವ್ವ ಹರಿಜನ, ಪುಷ್ಪಾವತಿ ಕರೆಕುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net