ಸಿರಿಧಾನ್ಯ ಬೆಳೆಯಿಂದ ಉತ್ತಮ ಆದಾಯ

BELE
ಯಲಬುರ್ಗಾ ಸಮೀಪದ ನೆಲಜೇರಿ ರೈತ ಶರಣಪ್ಪ ಮಾಲಿಪಾಟೀಲ್ ಜಮೀನಲ್ಲಿ ಸಜ್ಜೆ ಬೆಳೆಯ ಕ್ಷೇತ್ರೋತ್ಸವ ನಡೆಯಿತು. ಕೃಷಿ ಅಧಿಕಾರಿ ನಿಂಗಪ್ಪ ಹಿರೇಹಾಳ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಚನ್ನಬಸನಗೌಡ, ರೈತ ವಿರೂಪಾಕ್ಷಿ ಚುಕಣಿ ಸೇರಿದಂತೆ ಇತರರು ಇದ್ದರು.
Published on

ಯಲಬುರ್ಗಾ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡ ಸಜ್ಜೆ ಬೆಳೆ ಉತ್ತಮ ಫಸಲು ಬಂದಿದೆ ಎಂದು ಮಂಗಳೂರು ಆರ್‌ಎಸ್‌ಕೆ ಕೃಷಿ ಅಧಿಕಾರಿ ನಿಂಗಪ್ಪ ಹಿರೇಹಾಳ ಹೇಳಿದರು.

ಸಮೀಪದ ನೆಲಜೇರಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರದಿಂದ ಶರಣಪ್ಪ ಮಾಲಿಪಾಟೀಲ್ ಜಮೀನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಜ್ಜೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಬಾರಿ ಮುಂಗಾರು ಆಶಾದಾಯಕವಾಗಿದ್ದು, ಪ್ರತಿಯೊಂದು ಬೆಳೆಗಳು ಉತ್ತಮವಾಗಿ ಬೆಳೆದಿವೆ. ರೈತರು ಮಸಾರಿ ಭಾಗದಲ್ಲಿ ಹೆಚ್ಚಾಗಿ ಸಜ್ಜೆ ಬೆಳೆ ಬೆಳೆಯುತ್ತಿದ್ದು, ಸಿರಿಧಾನ್ಯಕ್ಕೆ ಒತ್ತು ನೀಡಿರುವುದು ಸಾವಯವ ಕೃಷಿಗೆ ಆದ್ಯತೆ ನೀಡಿದ್ದಾರೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯುವ ಮೂಲಕ ರೈತರು ಒಳ್ಳೆಯ ಆದಾಯ ಪಡೆಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net