ರೋಗದಿಂದ ದೂರವಿರಲು ಸ್ವಚ್ಛತೆ ಕಾಪಾಡಿ

JAGRUTHI
ಯಲಬುರ್ಗಾ ತಾಲೂಕಿನ ಸೋಂಪುರ-ಹೊಸೂರು ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಏರ್ಪಡಿಸಿದ್ದ ಆರೋಗ್ಯ ಶಿಬಿರದಲ್ಲಿ ಪಿಡಿಒ ರತ್ನಾ ಗುಂಡಣ್ಣವರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕಳಕಪ್ಪ ಎಚ್., ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಸಿಎಚ್‌ಒ ಗವಿಸಿದ್ದಪ್ಪ ಕುಂಬಾರ ಇದ್ದರು.
Published on

ಯಲಬುರ್ಗಾ: ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ಡೆಂೆ, ಮಲೇರಿಯಾ, ಚಿಕೂನ್‌ಗೂನ್ಯಾ ರೋಗ ಹರಡುತ್ತಿದ್ದು, ಜನರು ಜಾಗೃತರಾಗಬೇಕು ಎಂದು ಪಿಡಿಒ ರತ್ನಾ ಗುಂಡಣ್ಣವರ್ ಹೇಳಿದರು.

ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ವ್ಯಾಪ್ತಿಯ ಸೋಂಪುರ-ಹೊಸೂರು ಗ್ರಾಮದಲ್ಲಿ ನರೇಗಾದಡಿ ಕೈಗೊಳ್ಳಲಾದ ನಾಲಾ ಹೂಳೆತ್ತುವ ಸ್ಥಳದಲ್ಲಿ ಕೂಲಿಕಾರರಿಗೆ ಏರ್ಪಡಿಸಿದ್ದ ಆರೋಗ್ಯ ಶಿಬಿರದಲ್ಲಿ ಬುಧವಾರ ಮಾತನಾಡಿದರು.

ಎಲ್ಲರೂ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ಮಾರಕ ರೋಗಗಳಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಉದ್ಯೋಗ ಖಾತ್ರಿ ಕೆಲಸಕ್ಕೆ ಬರುವ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷ ಕಳಕಪ್ಪ ಎಚ್., ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಸಿಎಚ್‌ಒ ಗವಿಸಿದ್ದಪ್ಪ ಕುಂಬಾರ ಹಾಗೂ ಗ್ರಾಮ ಕಾಯಕ ಮಿತ್ರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net