ಕೋತಿಗಳ ಹಾವಳಿಗೆ ಬೇಸತ್ತ ನಿವಾಸಿಗಳು

130820 Yalaburga Monkey Arresment
ಯಲಬುರ್ಗಾದ ಮನೆಯೊಂದರ ಮಾಳಿಗೆ ಮೇಲೆ ಕೋತಿಗಳು ಜಮಾಯಿಸಿರುವುದು.
Published on

ಯಲಬುರ್ಗಾ: ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಕೋತಿಗಳ ಹಾವಳಿಯಿಂದ ನಿವಾಸಿಗಳು ಬೇಸತ್ತಿದ್ದಾರೆ. ಮನೆ ಮಾಳಿಗೆ ಮೇಲಿನ ಸಿಂಟೆಕ್ಸ್, ಡಿಶ್‌ಬುಟ್ಟಿ ಬೀಳಿಸುತ್ತಿವೆ. ಆಹಾರ ಧಾನ್ಯಗಳನ್ನು ಹಾಕಲು ಸಮಸ್ಯೆಯಾಗಿದೆ. ಹಾದಿ ಬೀದಿಯಲ್ಲಿ ನಡೆದಾಡುವ ಸಾರ್ವಜನಿಕರು, ಮಕ್ಕಳಿಗೆ ತೊಂದರೆ ನೀಡುತ್ತಿವೆ. ಅನ್ನ ನೀರಿಗಾಗಿ ಹರಸಿ ಬರುವ ಕೋತಿ, ಮಂಗಗಳ ಹಾವಳಿಯಿಂದ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಪಟ್ಟಣ ಪಂಚಾಯತಿಯಿಂದ ಮಂಗಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಅದರಂತೆ ಈ ಬಾರಿಯೂ ಹಿಡಿದು ಗುಡ್ಡಗಾಡು ಪ್ರದೇಶಕ್ಕೆ ಬಿಡುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net