ಗುಣಮಟ್ಟದ ಕಾಮಗಾರಿ ಜನರ ಜವಾಬ್ದಾರಿ; ಶಾಸಕ ಹಾಲಪ್ಪ ಆಚಾರ್ ಅಭಿಪ್ರಾಯ

15062021 Yelburga MLA Halappa Achar construction pooja
Published on

ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣಕ್ಕೆ ಭೂಮಿ ಪೂಜೆ

ಯಲಬುರ್ಗಾ: ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ನಡೆಯುವಂತೆ ನೋಡಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ತುಮ್ಮರಗುದ್ದಿ ಹಾಗೂ ಬಂಡಿ ಗ್ರಾಮಗಳಲ್ಲಿ ತಲಾ 28 ಲಕ್ಷ ರೂ. ವೆಚ್ಚದ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕರೊನಾ ಸಂಕಷ್ಟದ ನಡುವೆಯೂ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿದೆ. ಯಾವುದೇ ಕಾಮಗಾರಿಗಳಿದ್ದರೂ ಲೋಪದೋಷ ಕಂಡು ಬಂದರೆ ಗುಣಮಟ್ಟ ಕಾಯ್ದುಕೊಳ್ಳುವಂತೆ ತಾಕೀತು ಮಾಡುವಂತೆ ಸಲಹೆ ನೀಡಿದರು.

ತುಮ್ಮರಗುದ್ದಿ ಗ್ರಾಪಂ ಅಧ್ಯಕ್ಷೆ ನಿಂಗಮ್ಮ ತಳವಾರ್, ಬಂಡಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ ವಣಗೇರಿ, ಉಪಾಧ್ಯಕ್ಷರಾದ ಬಸಮ್ಮ ಹಿರೇಮಠ, ಹುಲಿಗೆಮ್ಮ ಕಡೆಮನಿ, ತಾಪಂ ಇಒ ಜಯರಾಮ್ ಚವ್ಹಾಣ್, ಪಿಡಿಒಗಳಾದ ರವಿಕುಮಾರ್ ಲಿಂಗಣ್ಣನವರ್, ನಾಗೇಶ ನಾಯ್ಕ, ಪ್ರಮುಖರಾದ ಸಿ.ಎಚ್.ಪಾಟೀಲ್, ಶರಣಪ್ಪ ಈಳಿಗೇರ್, ನೀಲಮ್ಮ ಬಾವಿಮನಿ, ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ಶಿವಪ್ಪ ವಾದಿ, ಸಂಗಪ್ಪ ಬಂಡಿ, ಕಲ್ಲಪ್ಪ ತೊಂಡಿಹಾಳ, ರಂಗನಾಥ ವಲ್ಮಕೊಂಡಿ, ಗ್ರಾಪಂ. ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net