ಗಣಿತ ಬಗೆಗಿನ ಭಯ, ಆತಂಕ ದೂರವಾಗಲಿ: ಸಂಪನ್ಮೂಲ ವ್ಯಕ್ತಿ ಅಬೀಬ್ ಪಾಷಾ ಸಲಹೆ

241222 Talakeri Demonstration of mathematical models
ತಾಳಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಗಣಿತದ ಮಾದರಿಗಳ ಪ್ರದರ್ಶನದಲ್ಲಿ ಸಂಪನ್ಮೂಲ ವ್ಯಕ್ತಿ ಅಬೀಬ್ ಪಾಷಾ, ಮುಖ್ಯಶಿಕ್ಷಕ ಬಾಬುಸಾಬ್ ಲೈನದಾರ್, ಶಿಕ್ಷಕರಾದ ದೇವೇಂದ್ರಪ್ಪ ಜಿರ್ಲಿ, ವೆಂಕಟಲಕ್ಷ್ಮೀ ಶೆಟ್ಟರ್ ಇತರರಿದ್ದರು.
Published on

ಯಲಬುರ್ಗಾ: ಗಣಿತ ಕಬ್ಬಿಣದ ಕಡಲೆಯಲ್ಲ. ದೈನಂದಿನ ಜೀವನದ ಪ್ರತಿ ಹೆಜ್ಜೆಯಲ್ಲೂ ಅಡಕವಾಗಿದೆ ಎಂದು ಗಣಿತ ಸಂಪನ್ಮೂಲ ವ್ಯಕ್ತಿ ಅಬೀಬ್ ಪಾಷಾ ಹೇಳಿದರು. ಗಣಿತಜ್ಞ ಶ್ರೀನಿವಾಸ ರಾಮಾನುಜನ ಜನ್ಮದಿನ ನಿಮಿತ್ತ ತಾಳಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ಅನಕ್ಷರಸ್ಥ ವ್ಯಕ್ತಿಗೂ ಗಣಿತ ಗೊತ್ತು. ಅದನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ್ದೇವೆ. ಈ ವಿಷಯದ ಬಗೆಗಿರುವ ಅನಗತ್ಯ ಭಯ, ಆತಂಕ ದೂರವಾಗಬೇಕು. ಚಟುವಟಿಕೆ ಮತ್ತು ಮಾದರಿಗಳ ಮೂಲಕ ಕಲಿತರೆ ಗಣಿತ ಇನ್ನೂ ಸುಲಭ ಎಂದರು. ಮುಖ್ಯಶಿಕ್ಷಕ ಬಾಬುಸಾಬ್ ಲೈನದಾರ್ ಮಾತನಾಡಿದರು. ವಿದ್ಯಾರ್ಥಿಗಳು ಗಣಿತ ಸೂತ್ರ, ಗೀತೆ, ನೃತ್ಯ, ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಶಿಕ್ಷಕರಾದ ದೇವೇಂದ್ರಪ್ಪ ಜಿರ್ಲಿ, ವೆಂಕಟಲಕ್ಷ್ಮೀ ಶೆಟ್ಟರ್, ಎಚ್.ರಮೇಶ್, ತಿಮ್ಮಣ್ಣ ಜಗ್ಗಲ್, ಶೋಭಾ ಬಾಗೇವಾಡಿ, ಸುನೀಲ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net