ಅನ್ಯಾಯ, ಅಧರ್ಮ ಖಂಡಿಸಿದ ವಚನಕಾರರು

yelburga swamiji death anniversary
ಮರಕಟ್‌ನಲ್ಲಿ ಶಿವೈಕ್ಯ ಶಿವಯ್ಯ ಸ್ವಾಮೀಜಿಯ 10ನೇ ವರ್ಷದ ಪುಣ್ಯಸ್ಮರಣೆ, 124ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಬಸವ ಕೇಂದ್ರದ 6ನೇ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಚನ ದರ್ಶನ ಕಾರ್ಯಕ್ರಮವನ್ನು ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಶಿವಾನಂದ ಸ್ವಾಮೀಜಿ, ನಿವೃತ್ತ ಪಿಎಸ್‌ಐ ಬಸನಗೌಡ ಪಾಟೀಲ್, ಅಮರೇಶಪ್ಪ ಬಳ್ಳಾರಿ, ಬಸವರಾಜಪ್ಪ ಕೋಳಿಹಾಳ ಇದ್ದರು.
Published on

ಯಲಬುರ್ಗಾ: ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಸಮಾನತೆಗಾಗಿ ವಚನ ಕ್ರಾಂತಿ ಮಾಡಿದ್ದಾರೆ ಎಂದು ಬೇಲೂರು-ಬದಾಮಿಯ ಗುರು ಬಸವೇಶ್ವರಮಠದ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಮರಕಟ್ ಗ್ರಾಮದ ಶಿವೈಕ್ಯ ಶಿವಯ್ಯ ಸ್ವಾಮೀಜಿಯ 10ನೇ ವರ್ಷದ ಪುಣ್ಯಸ್ಮರಣೆ, 124ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಬಸವ ಕೇಂದ್ರದ 6ನೇ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ವಚನ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂದಿನ ಸಮಾಜದಲ್ಲಿ ಕಂಡ ಅನ್ಯಾಯ, ಅಧರ್ಮ, ಅಸಮಾನತೆ, ಮೂಢನಂಬಿಕೆ ಮತ್ತು ಡಾಂಭಿಕತೆಯನ್ನು ವಚನಗಳ ಮೂಲಕ ಪ್ರತಿಭಟಿಸಿದರು ಎಂದರು.ಕನಸಾವಿಯ ರಾಷ್ಟ್ರೀಯ ಬಸವದಳ ಗೌರವಾಧ್ಯಕ್ಷ ಬಸನಗೌಡ ಪಾಟೀಲ್, ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿದರು.

ಮಕ್ಕಳ್ಳಿಯ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಹನುಮವ್ವ ಮುಸಲಾಪುರ, ಗಣ್ಯರಾದ ಬಸನಗೌಡ ಪಾಟೀಲ್, ಬಸವರಾಜಪ್ಪ ಕೋಳಿಹಾಳ, ರೇಣುಕಪ್ಪ ಮಂತ್ರಿ, ದೇವಪ್ಪ ಕೋಳೂರು, ಬಾಲಪ್ಪ ಕರುವಿನ, ಕೊಟ್ರಪ್ಪ ಬಸರಿಹಾಳ, ಗಿರಿಮಲ್ಲಪ್ಪ ಪರಂಗಿ, ಬಸವರಾಜ ಹೂಗಾರ, ಕುಂಟೆಪ್ಪ ಹರಿಜನ, ಯಮನವ್ವ ನಿರುಪಾದೇಪ್ಪ ಹುಣಸಿಹಾಳ, ಸೋಮಶೇಖರ ಉಚ್ಚಲಕುಂಟಿ, ಸಾವಿತ್ರಮ್ಮ ಆವಾರಿ, ರಮೆಶ ಕುಂಟೋಜಿ, ಯಮನೂರಪ್ಪ ಪರಂಗಿ, ಚನ್ನಬಸಪ್ಪ ಮೇಟಿ, ಹನುಮಗೌಡ ವನಜಭಾವಿ, ಮುಕ್ಕಣ್ಣ ಹೊಸಳ್ಳಿ, ಕೆಇಬಿ ಶಾಖಾಧಿಕಾರಿ ಸೋಮಶೇಖರ ಹಿರೇವಂಕಲಕುಂಟಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net