ವಾಲ್ಮೀಕಿ ಕುರಿತು ಅಧ್ಯಯನ ನಡೆಯಲಿ

MERAVENIGI
ಯಲಬುರ್ಗಾ ತಾಲೂಕಿನ ಯಡ್ಡೋಣಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ಸಿದ್ದಯ್ಯ ಹಿರೇಮಠ, ಜಗದೀಶಯ್ಯ ಹಿರೇಮಠ, ಅಯ್ಯಪ್ಪ ಗುಳೆದ, ಆದೇಶ ರೊಟ್ಟಿ, ಶರಣಪ್ಪ ಗುಡೂರು ಇತರರಿದ್ದರು.
Published on

ಯಲಬುರ್ಗಾ: ಮನುಕುಲದ ಉದ್ಧಾರಕ್ಕಾಗಿ ರಾಮಾಯಣ ಗ್ರಂಥ ನೀಡಿದ ವಾಲ್ಮೀಕಿ ಆದರ್ಶ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ನಾಯಕ ಸಮಾಜದ ಗುರು ಹುಲಿಹೈದರದ ರಾಜಾ ನವೀನಚಂದ್ರ ನಾಯಕ ಹೇಳಿದರು.

ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು. ಸಮಾಜದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು. ಯುವಕರು ವಾಲ್ಮೀಕಿ ಕುರಿತು ಅಧ್ಯಯನ ಮಾಡಬೇಕು ಎಂದರು.

ಕಾರ್ಯಕ್ರಮಕ್ಕೂ ಮುಂಚೆ ಬಸವೇಶ್ವರ ದೇವಸ್ಥಾನದಿಂದ ಮಹಿಳೆಯ ಕುಂಭೋತ್ಸವದೊಂದಿಗೆ ವಾಲ್ಮೀಕಿ ಭಾವಚಿತ್ರ ಮೇರವಣಿಗೆ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ವಾಲ್ಮೀಕಿ ವೃತ್ತಕ್ಕೆ ಪೂಜೆ ಸಲ್ಲಿಸಲಾಯಿತು.

ಪ್ರಮುಖರಾದ ಸಿದ್ದಯ್ಯ ಹಿರೇಮಠ, ಜಗದೀಶಯ್ಯ ಹಿರೇಮಠ, ಅಯ್ಯಪ್ಪ ಗುಳೆದ, ಆದೇಶ ರೊಟ್ಟಿ, ಶರಣಪ್ಪ ಗುಡೂರು, ಶಂಕ್ರಮ್ಮ ಬಿಜಕಲ್, ಶ್ರೀಕಾಂತಗೌಡ ಮಾಲಿಪಾಟೀಲ್, ಹನಮಗೌಡ ಗೌಡ್ರ, ವೀರಭದ್ರಪ್ಪ ಶೆಟ್ರ, ಹನುಮಪ್ಪ ಚಿದಗಾರ, ಬಾಲಪ್ಪ ಗೌಡ್ರ, ಹುಗ್ಗೇಶ ಹುಗ್ಗಿ, ನಿಂಗಪ್ಪ ತುಂಬದ, ಮರಿಯಪ್ಪ ಬಡಗಿ, ಮಹಾಂತೇಶಗೌಡ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net