ಪಾದಯಾತ್ರೆಯಿಂದ ಮನಸ್ಸಿಗೆ ನೆಮ್ಮದಿ

PADAYATRE
ಯಲಬುರ್ಗಾದಿಂದ ಯಾದಗಿರಿ ಏಳುಕೋಟಿ ಮಲ್ಲಯ್ಯ ದೇವಸ್ಥಾನಕ್ಕೆ ಭಕ್ತರು ಪಾದಯಾತ್ರೆ ನಡೆಸಿದರು. ಗಣ್ಯರಾದ ಶಿವಕುಮಾರ ಭೂತೆ, ಶಿವಪುತ್ರಪ್ಪ ಕೊಪ್ಪಳ, ನಾಗಪ್ಪ ಮಾಲಗಿತ್ತಿ, ನಾಗಪ್ಪ ಉಂಡಿ, ಮಲ್ಲಪ್ಪ ಗೊರಳ್ಳಿ, ಸಿದ್ರಾಮಗೌಡ ಮಾಲಿಪಾಟೀಲ್ ಇದ್ದರು.
Published on

ಯಲಬುರ್ಗಾ: ಪಟ್ಟಣದ ಮಲ್ಲಯ್ಯ ದೇವಸ್ಥಾನದಿಂದ ಯಾದಗಿರಿಯ ಏಳುಕೋಟಿ ಮಲ್ಲಯ್ಯ ದೇವಸ್ಥಾನಕ್ಕೆ ಭಕ್ತರು ಸೋಮವಾರ ಪಾದಯಾತ್ರೆ ಆರಂಭಿಸಿದರು.

ವರ್ತಕರ ಸಂಘದ ಸ್ಥಳೀಯ ಅಧ್ಯಕ್ಷ ಶಿವಕುಮಾರ ಭೂತೆ ಮಾತನಾಡಿ, ಈ ಸಂಪ್ರದಾಯ 19 ವರ್ಷಗಳಿಂದ ಮುಂದುವರಿಸಿಕೊಂಡು ಬರಲಾಗಿದೆ. ಪಾದಯಾತ್ರೆಯಿಂದ ಮನಸ್ಸು ನೆಮ್ಮದಿಯಾಗುವ ಜತೆಗೆ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಎಂದರು.

ಗಣ್ಯರಾದ ಬಸಲಿಂಗಪ್ಪ ಭೂತೆ, ಶಿವಪುತ್ರಪ್ಪ ಕೊಪ್ಪಳ, ನಾಗಪ್ಪ ಮಾಲಗಿತ್ತಿ, ನಾಗಪ್ಪ ಉಂಡಿ, ಮಲ್ಲಪ್ಪ ಗೊರಳ್ಳಿ, ಸಿದ್ರಾಮಗೌಡ ಮಾಲಿಪಾಟೀಲ್, ಶಿವಕುಮಾರ ಭೂತೆ, ಫಕ್ಕೀರಪ್ಪ ಉಪ್ಪಾರ, ಬಸವರಾಜ ಕೊಪ್ಪಳ, ಬಸಪ್ಪ ಮುಧೋಳ, ಈಶಪ್ಪ ಬನ್ನಿಕೊಪ್ಪ, ಕುಬೇರಗೌಡ ಮಾಲಿಪಾಟೀಲ್, ಮಲ್ಲಿಕಾರ್ಜುನ ಸಾದರಖಾನ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net