ಕಾರ್ಮಿಕರು ಇರದಿದ್ದರೆ ದೇಶದ ಅಭಿವೃದ್ಧಿ ಅಸಾಧ್ಯ

KARMIKARA-DINACHARANE
ಯಲಬುರ್ಗಾ ತಾಲೂಕಿನ ಮುರಡಿ ತಾಂಡಾದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ದಿನ ಆಚರಣೆ ಹಿನ್ನೆಲೆಯಲ್ಲಿ ಕೂಲಿಕಾರರಿಂದ ಕೇತ್ ಕತ್ತರಿಸಲಾಯಿತು. ತಾಪಂ ಇಒ ಸಂತೋಷ್ ಪಾಟೀಲ್, ಬಿಎಫ್‌ಟಿ ಬಸೆಟ್ಟೆಪ್ಪ ಇತರರಿದ್ದರು.
Published on

ಯಲಬುರ್ಗಾ: ಜಗತ್ತಿನಲ್ಲಿ ಕಾರ್ಮಿಕರು ಇರದಿದ್ದರೆ ಅಭಿವೃದ್ಧಿ ಅಸಾಧ್ಯ. ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಹಿರಿದು ಎಂದು ತಾಪಂ ಇಒ ಸಂತೋಷ್ ಪಾಟೀಲ್ ಹೇಳಿದರು.

ತಾಲೂಕಿನ ಮುರಡಿ ಗ್ರಾಪಂ ವ್ಯಾಪ್ತಿಯ ಮುರಡಿ ತಾಂಡಾ ಬಳಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

KARMIKARU
ಯಲಬುರ್ಗಾ ತಾಲೂಕಿನ ಮುರಡಿ ತಾಂಡಾದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನ ಆಚರಣೆಯಲ್ಲಿ ಪಾಲ್ಗೊಂಡಿದ್ದ ಕೂಲಿಕಾರರು.

ಒಬ್ಬ ಇಂಜಿನಿಯರ್ ನೀಲನಕ್ಷೆ ಸಿದ್ಧಪಡಿಸುತ್ತಾನೆ ಆದರೆ, ಅದನ್ನು ಕಟ್ಟುವವನು, ನಿರ್ಮಾಣ ಮಾಡುವವರು ಕಾರ್ಮಿಕ. ಇಂತಹ ಶ್ರಮಜೀವಿಗಳು ಮತ್ತವರ ಕೆಲಸವನ್ನು ಗೌರವಿಸುವ ಕೆಲಸವಾಗಬೇಕು.

ಆದ್ದರಿಂದ ಸರ್ಕಾರ ಕಾರ್ಮಿಕರಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದ್ದು ಅವುಗಳ ಸದುಪಯೋಗ ಪಡೆಯಬೇಕು. ನರೇಗಾ ಕಾಮಗಾರಿಯಲ್ಲಿ ತೊಡಗಿಸಿಕೊಂಡು ಸಮಾನ ಕೂಲಿ ಸಮಾನ ವೇತನ ಪಡೆಯಲು ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾರ್ಮಿಕ ದಿನ ಆಚರಣೆ ಹಿನ್ನೆಲೆಯಲ್ಲಿ ಕೂಲಿಕಾರರಿಂದ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಐಇಸಿ ಸಂಯೋಜಕರ ಶರಣಪ್ಪ ಹಾಳಕೇರಿ, ತಾಂತ್ರಿಕ ಸಹಾಯಕ ಸಂಗಮೇಶ, ಪಿಡಿಒ ಅಬ್ದುಲ್ ಗಫಾರ್, ಡಿಇಒ ರಮೇಶ್, ಬಿಎಫ್‌ಟಿ ಬಸೆಟೆಪ್ಪ, ಕರವಸೂಲಿಗಾರ ಗಿರಿಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net